ಮನ್ಶರ್ ವಿದ್ಯಾಲಯದಲ್ಲಿ ಭೂಮಿ ದಿನಾಚರಣೆ

Update: 2016-04-26 18:08 GMT


ಮಂಗಳೂರು, ಎ.26: ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಮನ್ಶರಾಬಾದ್‌ನ ಮನ್ಶರ್ ವಿದ್ಯಾಲಯದ ಕ್ಯಾಂಪಸ್‌ನಲ್ಲಿ ಭೂಮಿ ದಿನದ ಅಂಗವಾಗಿ ವಿದ್ಯಾರ್ಥಿಗಳು ವಿಧ ವಿಧದ ಗಿಡಗಳನ್ನು ನೆಟ್ಟು ಸಂಭ್ರಮಾಚರಿಸಿದರು. ಮನ್ಶರ್ ಸಂಸ್ಥೆಯ ಅಧ್ಯಕ್ಷ ಸೈಯದ್ ಸಿಟಿಎಂ ತಂಙಳ್ ಭೂಮಿ ದಿನಾಚರಣೆಯನ್ನು ಉದ್ಘಾಟಿಸಿ, ದಿನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಸಮಾಜದಲ್ಲಿ ಬದಲಾವಣೆಗೆ ವಿದ್ಯಾರ್ಥಿಗಳು ಪ್ರಮುಖ ರಾಯಭಾರಿಗಳಾಗಿದ್ದು, ಉತ್ತಮ ಪದ್ಧತಿಗಳ ಬಗ್ಗೆ ಮಕ್ಕಳನ್ನು ಪ್ರಥಮವಾಗಿ ಜಾಗೃತಗೊಳಿಸಬೇಕು ಎಂದವರು ಹೇಳಿದರು. ಮನ್ಶರ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News