ಕಾಪು ಪುರಸಭೆ: ಇಂದು ಮತಗಳ ಎಣಿಕೆ

Update: 2016-04-26 18:40 GMT

ಉಡುಪಿ, ಎ.26: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಪು ಪುರಸಭೆಗೆ ನಡೆದ ಚೊಚ್ಚಲ ಚುನಾವಣೆಯ ಮತಗಳ ಎಣಿಕೆ ಎ.27ರಂದು ಬೆಳಗ್ಗೆ 8ಕ್ಕೆ ಉಡುಪಿ ತಹಶೀಲ್ದಾರರ ಕಚೇರಿ ಆವರಣದ ಆಫೀಸರ್ಸ್ ಕ್ಲಬ್‌ನಲ್ಲಿ ಪ್ರಾರಂಭಗೊಳ್ಳಲಿದೆ.
 
ಕಾಪು ಪುರಸಭೆಯಲ್ಲಿ 23 ಸ್ಥಾನಗಳಿದ್ದು, ಇವುಗಳಿಗೆ ಸ್ಪರ್ಧಿಸಿರುವ 58 ಸ್ಪರ್ಧಿಗಳ ಹಣೆಬರಹ ಈಗಾಗಲೇ ವಿದ್ಯುನ್ಮಾನ ಯಂತ್ರಗಳಲ್ಲಿ ಬಂಧಿಯಾಗಿದ್ದು, ನಾಳೆ ಎಲ್ಲರ ಸೋಲು-ಗೆಲುವು ಅನಾವರಣಗೊಳ್ಳಲಿದೆ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್, ವಿದ್ಯುನ್ಮಾನ ಉಪಕರಣ, ಕೆಮರಾ ಹಾಗೂ ಯಾವುದೇ ಆಯುಧ ಕೊಂಡೊಯ್ಯುವಂತಿಲ್ಲ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮತ ಎಣಿಕೆ ಕೇಂದ್ರದ ಸುತ್ತಲೂ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಚುನಾವಣಾ ಫಲಿತಾಂಶವನ್ನು ್ಠಛ್ಠಜಿಠಿಚ್ಝ್ಠ.ಜ್ಞಿ ಇದರಲ್ಲಿ ಬೆಳಗ್ಗೆ 8ರಿಂದ ವೀಕ್ಷಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News