ವಿದ್ಯಾನಗರದ ಆದಾಯ ತೆರಿಗೆ ಇಲಾಖೆಯ ಕಚೇರಿಗೆ ಸಂಪೂರ್ಣ ಸೋಲಾರ್ ಅಳವಡಿಕೆ

Update: 2016-04-27 04:38 GMT

ಕಾಸರಗೋಡು, ಎ. 27:   ವಿದ್ಯಾನಗರದ  ಆದಾಯ ತೆರಿಗೆ ಇಲಾಖೆಯ  ಕಚೇರಿ  ಸಂಪೂರ್ಣ  ಸೋಲಾರ್  ಅಳವಡಿಸಿದ್ದು,  ಎ.28 ರಂದು  ಬೆಳಿಗ್ಗೆ 11 ಗಂಟೆಗೆ  ಕೇರಳ ಆದಾಯ ತೆರಿಗೆ  ಇಲಾಖಾ  ಮುಖ್ಯ ಆಯುಕ್ತ  ಪಿ. ಆರ್ ರವಿಕುಮಾರ್  ಯೋಜನೆಗೆ   ಚಾಲನೆ ನೀಡುವರು.  ಪ್ರಣಬ್ ಕುಮಾರ್ ದಾಸ್,  ಪಿ.  ಎನ್ ದೇವದಾಸನ್ , ಎ. ಮೋಹನ್ , ಎ . ಮುರಳೀಧರನ್ ಮೊದಲಾದವರು ಉಪಸ್ಥಿತರಿರುವರು.

ವಿದ್ಯುತ್ ಅಭಾವದಿಂದ ತತ್ತರಿಸುತ್ತಿರುವ  ಈ ಸಂದರ್ಭದಲ್ಲಿ  ಸ್ವಂತ ವಿದ್ಯುತ್ ಉತ್ಪಾದಿಸುವ ಮೂಲಕ  ಕಾಸರಗೋಡಿನ  ಸರಕಾರಿ ಕಚೇರಿಯೊಂದು ಮಾದರಿಯಾಗಿದೆ.
ನಗರ ಹೊರವಲಯದಲ್ಲಿರುವ  ಆದಾಯ ತೆರಿಗೆ ಇಲಾಖಾ ಕಚೇರಿ ಸೋಲಾರ್ ವಿದ್ಯುತ್  ಉತ್ಪಾದಿಸುವ ಮೂಲಕ  ದೇಶದಲ್ಲೇ ಮೊದಲ ಕಚೇರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಚೇರಿಗೆ ಅಗತ್ಯ ಇರುವ ವಿದ್ಯುತ್   ಬಳಕೆ  ಮಾತ್ರವಲ್ಲ   ಹೆಚ್ಚುವರಿ ವಿದ್ಯುತ್ ನ್ನು  ಕೆ ಎಸ್ ಇ ಬಿ ಗೆ  ನೀಡಲು ಒಪ್ಪಂದಕ್ಕೆ ಬರಲಾಗಿದೆ . ಸೌರ ಶಕ್ತಿ ವಿದ್ಯುತ್ ಉತ್ಪಾದನೆ ಹಿನ್ನಲೆಯಲ್ಲಿ  ಎಪ್ರಿಲ್ ತಿಂಗಳಿನಿಂದ  ಕಾಸರಗೋಡಿನ ಆದಾಯ ತೆರಿಗೆ ಇಲಾಖಾ ಕಚೇರಿ  ಕೆ ಎಸ್ ಇ ಬಿ ಗೆ ಶುಲ್ಕ ಪಾವತಿಸಬೇಕಿಲ್ಲ.  ಕೇಂದ್ರ ಸರಕಾರಿ ಕಛೇರಿಗಳಲ್ಲಿ   ಪರಂಪರಾಗತ ವಿದ್ಯುತ್ ಉತ್ಪಾದನೆ ಗೆ  ಆದ್ಯತೆ ನೀಡುವ ನಿಟ್ಟಿ ನಲ್ಲಿ    ಸೌರ ವಿದ್ಯುತ್   ಯೋಜನೆ ಆರಂಭಿಸಲಾಗುತ್ತಿದ್ದು, ಮುಂದೆ  ಕಣ್ಣೂರು , ಕಾಸರಗೋಡು  ಕಚೇರಿಯಲ್ಲೂ  ಅಳವಡಿಸಲು ತೀರ್ಮಾನಿಸಲಾಗಿದೆ.

   ಕೇಂದ್ರ   ಪರಂಪರಗತಾ ವಿದ್ಯುತ್  ಸಚಿವಾಲಯದ  ಅಂಗೀಕಾರದೊಂದಿಗೆ   ಮೂಪೆನ್ಸ್ ಎನರ್ಜಿ ಸೋಲ್ಯೂಸನ್  ಪ್ರೈವೆಟ್ ಲಿಮಿಟೆಡ್  ಇದರ ಪ್ಲಾಂಟ್ ನಿರ್ಮಿಸಿದೆ. ಪ್ರತಿದಿನ ಇಲ್ಲಿ  ೫೭ ಯೂನಿಟ್  ಉತ್ಪಾದಿಸಲಾಗುತ್ತಿದೆ. ಆದರೆ ಕಚೆರಿಹೆ  ೪೦ ರಿಂದ ೪೫ ಯೂನಿಟ್ ವಿದ್ಯುತ್ ಮಾತ್ರ ಬಳಕೆ ಯಾಗಲಿದೆ.  ಉಳಿದ ವಿದ್ಯುತನ್ನು  ಕೆ ಎಸ್ ಇ ಬಿ ಗ್ರಿಡ್ ಗೆ  ಹಸ್ತಾಂತರಿಸಲಾಗುವುದು.

ಇದರಿಂದ ವಿದ್ಯುತ್  ಕಡಿತ , ದುಬಾರಿ ಬಿಲ್ ಎಂಬ ಸಮಸ್ಯೆಯಿಂದ ಕಾಸರಗೋಡಿನಲ್ಲಿರುವ  ಆದಾಯ ತೆರಿಗೆ ಇಲಾಖಾ ಕಚೇರಿ  ಪಾತ್ರವಾಗಲಿದೆ.
ಸುದ್ದಿಗೋಷ್ಠಿಯಲ್ಲಿ  ಆದಾಯ ತೆರಿಗೆ ಇಲಾಖೆಯ  ಜಂಟಿ ಆಯುಕ್ತ ಕೆ . ಎ ಚಂದ್ರಕುಮಾರ್ ,  ಎ. ಮುರಳೀಧರನ್ , ಕೆ . ಶ್ರೀಜೇಶ್ ಮೊದಲಾದವರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News