ಉಚ್ಚಿಲ: ಫುಟ್ಬಾಲ್ ಪಂದ್ಯಾಟ ಉದ್ಘಾಟನೆ

Update: 2016-04-27 18:15 GMT

ಉಚ್ಚಿಲ, ಎ.27: ‘ಫ್ರೆಂಡ್ಸ್ ಉಚ್ಚಿಲ್’ ಆಯೋಜಿಸಿದ್ದ ‘ಚಾಂಪಿಯನ್ ಟ್ರೋಫಿ-2016’ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟ ಉಚ್ಚಿಲದ ಬ್ರದರ್ಸ್ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸೊಮೇಶ್ವರ ಗ್ರಾಪಂ ಅಧ್ಯಕ್ಷ ರಾಜೇಶ್ ಉಚ್ಚಿಲ್ ಉದ್ಘಾಟಿಸಿದರು. ಮುನೀಶ್ ಮತ್ತು ತಂಡ ರಾಷ್ಟ್ರಗೀತೆ ಹಾಡಿದರು. ಬ್ಯಾರೀಸ್ ವೆಲ್ಫೇರ್ ಫೋರಂ ಅಬುದಾಭಿ ಇದರ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ, ಉಚಿ್ಚಲ ಯು.ಆರ್.ಅಕಾಡಮಿ ಕೋಚ್ ಉಮೇಶ್ ಉಚ್ಚಿಲ, ಉಚ್ಚಿಲ ಬ್ರದರ್ಸ್ ತಂಡದ ಮಾಜಿ ಕೋಚ್ ನಾಗೇಶ್ ಉಚ್ಚಿಲ, ಕೋಟೆಕಾರ್ ಪಪಂ ಕೌನ್ಸಿಲರ್ ಮೊಯ್ದಿನ್ ಬಾವಾ ಅವರನ್ನು ಸನ್ಮಾನಿಸಲಾಯಿತು.
ಸಮಾಜ ಸೇವಕ ಅಬ್ಬಾಸ್ ಉಚ್ಚಿಲ ರಿಯಾದ್, ತೊಕ್ಕೊಟ್ಟು ಸೂಪರ್ ಜ್ಯುವೆಲ್ಲರ್ಸ್‌ನ ಇಸ್ಮಾಯೀಲ್ ನಾಗತೋಟ, ಸೊಮೇಶ್ವರ್ ಗ್ರಾಪಂ ಸದಸ್ಯ ಇಸ್ಮಾಯೀಲ್ ುು.ಎನ್., ಮಾಜಿ ಸದಸ್ಯ ಯು.ಕೆ. ಅಹ್ಮದ್ ಕುಂಞಿ, ಸಮಾಜ ಸೇವಕ ಯು.ಕೆ.ಆದಂ ಕುಂಞಿ ಉಪಸ್ಥಿತರಿದ್ದರು.ಅಬ್ದುಸ್ಸಲಾಂ ಯು.ಸ್ವಾಗತಿಸಿದರು. ನಾಸಿರ್ ಜಿ.ಎಂ. ಝಕೀರ್, ಜಿ.ಎಂ. ಆರಿಫ್, ಮಜೀದ್, ಸಲೀಮ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News