ಕೋಟೆಕಾರು ಪಪಂ: ಬಿಜೆಪಿ ಜಯಭೇರಿ

Update: 2016-04-27 18:18 GMT

ಉಳ್ಳಾಲ, ಎ.27: ಕೋಟೆಕಾರು ಪಪಂ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದ್ದು, ಪಂಚಾಯತ್‌ನ 17 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಗಳಿಸಿ ಬಹುಮತದೊಂದಿಗೆ ಅಧಿಕಾರಕ್ಕೇರಿದೆ.

ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಗಳಿಸಿದ್ದು, ಪಕ್ಷೇತರರಾಗಿ ಸ್ಪರ್ಧಿಸಿದ್ದ ಇಬ್ಬರು ಬಿಜೆಪಿ ಬಂಡಾಯ ಅಭ್ಯರ್ಥಿಗಳು ಜಯಶಾಲಿಯಾದರೆ, ಸಿಪಿಎಂ ಮತ್ತು ಎಸ್‌ಡಿಪಿಐಯ ತಲಾ ಓರ್ವರು ಆಯ್ಕೆಯಾಗಿದ್ದಾರೆ. ಕೋಟೆಕಾರು ಪಪಂನ 17 ಸ್ಥಾನದಲ್ಲಿ ಒಂದು ಸ್ಥಾನಕ್ಕೆ ಕಾಂಗ್ರೆಸ್‌ನ ಸದಸ್ಯ ಮೊಯ್ದಿನ್ ಬಾವ ಅವಿರೋಧವಾಗಿ ಆಯ್ಕೆಯಾಗಿದ್ದರು.

8 ಸ್ಥಾನಗಳಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇವರಲ್ಲಿ ಕೋಟೆಕಾರು ಗ್ರಾಪಂನ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರು ಸ್ಪರ್ಧಾ ಕಣದಿಂದ ಹಿಂದಕ್ಕೆ ಸರಿದಿದ್ದರು. ಬಿಜೆಪಿಯಲ್ಲಿ ಸ್ಪರ್ಧಾ ಆಕಾಂಕ್ಷಿಗಳಿಂದ ಪ್ರಾರಂಭದಲ್ಲಿ ತೀವ್ರ ವಿರೋಧವಿತ್ತು. ಅಭ್ಯರ್ಥಿಗಳ ಆಯ್ಕೆಯ ಬಳಿಕ ಬಿಜೆಪಿಯಲ್ಲಿದ್ದ ಸುಮಾರು 8 ಮಂದಿ ಆಕಾಂಕ್ಷಿಗಳು ಬಂಡಾಯವಾಗಿ ಸ್ಪರ್ಧಿಸಿದ್ದು, ಬಂಡಾಯದ ನಡುವೆಯೂ ಬಿಜೆಪಿ ಮತದಾರರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಕೋಟೆಕಾರಿನಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದು, ಅವಿರೋಧವನ್ನು ಹೊರತುಪಡಿಸಿದರೆ ಎಂಟು ಅಭ್ಯರ್ಥಿಗಳಲ್ಲಿ ಮೂವರು ಮಾತ್ರ ವಿಜಯಿಯಾಗಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ತಾಪಂ ಮಾಜಿ ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು, ಬಂಡಾಯ ಅಭ್ಯರ್ಥಿಗಳಾದ ಕೋಟೆಕಾರು ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಪೂಜಾರಿ, ಕಣದಿಂದ ಹಿಂದೆ ಸರಿದಿದ್ದ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರು, ಕಾಂಗ್ರೆಸ್‌ನ ಅಭ್ಯರ್ಥಿ ಕೋಟೆಕಾರು ಪಂಚಾಯತ್ ಮಾಜಿ ಅಧ್ಯಕ್ಷೆ ರೇಣುಕಾ ಶೆಟ್ಟಿ, ಎರಡು ಬಾರಿ ಸದಸ್ಯರಾಗಿ ಒಂದು ಅವಧಿಗೆ ಉಪಾಧ್ಯಕ್ಷರಾಗಿದ್ದ ಸಿಪಿಎಂನ ನಾಗೇಶ್ ಪೂಜಾರಿ ಸೋತ ಪ್ರಮುಖರು.

ವಿಜಯಿ ಅಭ್ಯರ್ಥಿಗಳು ಪಡೆದ ಮತಗಳ ವಿವರ 1ನೆ ವಾರ್ಡ್: ಭಾರತೀ ರಾಘವ (ಬಿಜೆಪಿ) 442, 2ನೆ ವಾರ್ಡ್: ಜಯಶ್ರೀ ಪ್ರಫುಲ್ಲದಾಸ್ (ಪಕ್ಷೇತರ, ಬಿಜೆಪಿ ಬಂಡಾಯ) 314, 3ನೆ ವಾರ್ಡ್: ಲೋಹಿತ್ ಪೂಜಾರಿ ಮಾಡೂರು (ಪಕ್ಷೇತರ, ಬಿಜೆಪಿ ಬಂಡಾಯ) 350, 4ನೆ ವಾರ್ಡ್: ಮೋಹನ್ ಬಲ್ಯ (ಬಿಜೆಪಿ) 222, 5ನೆ ವಾರ್ಡ್: ಅನಿಲ್ ಕುಮಾರ್ ಬಗಂಬಿಲ (ಬಿಜೆಪಿ) 388, 6ನೆ ವಾರ್ಡ್: ವಿದ್ಯಾ ಟಿ. ನಾರಾಯಣ(ಬಿಜೆಪಿ) 171, 7ನೆ ವಾರ್ಡ್: ಉದಯ ಕುಮಾರ್ ಶೆಟ್ಟಿ ಸುಳ್ಳೆಂಜೀರು (ಬಿಜೆಪಿ) 245, 8ನೆ ವಾರ್ಡ್: ಸುಮತಿ (ಸಿಪಿಎಂ) 206, 9ನೆ ವಾರ್ಡ್: ಹಮೀದ್ ಹಸನ್(ಕಾಂಗ್ರೆಸ್) 209, 10ನೆ ವಾರ್ಡ್: ಧೀರಜ್ ಕುಸಾಲ್‌ನಗರ (ಬಿಜೆಪಿ) 352, 11ನೆ ವಾರ್ಡ್: ದಿವ್ಯಾ ಸತೀಶ್ ಶೆಟ್ಟಿ ನಡಾರುಗುತ್ತು (ಬಿಜೆಪಿ) 428, 12ನೆ ವಾರ್ಡ್: ಡಿ.ಎಂ. ಮುಹಮ್ಮದ್ (ಕಾಂಗ್ರೆಸ್) 303, 13ನೆ ವಾರ್ಡ್: ಲ್ಯಾನ್ಸಿ ಡಿಸೋಜ (ಕಾಂಗ್ರೆಸ್) 213, 14ನೆ ವಾರ್ಡ್: ಪ್ರಶಾಂತ್ (ಬಿಜೆಪಿ) 248, 15ನೆ ವಾರ್ಡ್: ಅಣ್ಣು (ಬಿಜೆಪಿ) 421, 16ನೆ ವಾರ್ಡ್: ಝುಲೇಖಾ ಬಶೀರ್ (ಎಸ್‌ಡಿಪಿಐ) 301, 17ನೆ ವಾರ್ಡ್: ಮೊಯ್ದಿನ್ ಬಾವ (ಅವಿರೋಧ ಆಯ್ಕೆ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News