ಇಂದಿನಿಂದ ಸ್ನೋವರ್ಲ್ಡ್ ಆರಂಭ

Update: 2016-04-27 18:19 GMT

ಮಂಗಳೂರು, ಎ.27: ರೋಯಲ್ ಕಾರ್ನಿವಲ್ ಎಕ್ಸಿಬಿಟ್ ವತಿಯಿಂದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯುತ್ತಿರುವ ಮಂಗಳೂರು ‘ಸಮ್ಮರ್ ಫೆಸ್ಟಿವಲ್- 2016’ ವಸ್ತುಪ್ರದರ್ಶನದಂಗವಾಗಿ ಎ.28ರಿಂದ ಸ್ನೋವರ್ಲ್ಡ್ ಆರಂಭಗೊಳ್ಳಲಿದೆ. ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಮಂಗಳೂರು ಸಮ್ಮರ್ ಫೆಸ್ಟಿವಲ್ ಸಂಯೋಜಕ ಮುಷ್ತಾಕ್, ಉಳ್ಳಾಲ ನಗರ ಸಭಾ ಸದಸ್ಯ ದಿನೇಶ್ ರೈ, ನಗರದಲ್ಲಿ ಇದೇ ಮೊದಲ ಬಾರಿಗೆ ಪ್ರಪಂಚದ ಏಳು ಅದ್ಭುತಗಳ ಜೊತೆಗೆ ಬೇಸಿಗೆಯಲ್ಲ್ಲೂ ಚಳಿಗಾಲ ಅನುಭವ ನೀಡಲಿದೆ ಎಂದರು.
ಉದ್ಘಾಟನೆಯನ್ನು ಶಾಸಕ ಬಿ.ಎ.ಮೊಯ್ದಿನ್ ಬಾವ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವ ಯು.ಟಿ.ಖಾದರ್, ಶಾಸಕರಾದ ಜೆ.ಆರ್.ಲೋಬೊ, ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ಎಸ್.ಆರ್.ಬಂಡಿಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಉಪಸ್ಥಿತರಿರುವರು. ಸಾರ್ವಜನಿಕರಿಗೆ ಸ್ನೋವರ್ಲ್ಡ್‌ನೊಳಗೆ 10 ನಿಮಿಷಗಳ ಅವಧಿಗೆ ಪ್ರವೇಶ ಶುಲ್ಕವಾಗಿ 40 ರೂ. ಮಕ್ಕಳಿಗೆ 20 ರೂ. ನಿಗದಿಪಡಿಸಲಾಗಿದೆ. ಸಂಪೂರ್ಣ ಮಂಜುಗಡ್ಡೆಯಿಂದ ನಿರ್ಮಿತ ಈ ಸ್ನೋವರ್ಲ್ಡ್‌ನಲ್ಲಿ ಒಬ್ಬ ವ್ಯಕ್ತಿ 10 ನಿಮಿಷಕ್ಕಿಂತ ಜಾಸ್ತಿ ಹೊತ್ತು ಕಳೆಯಲು ಸಾಧ್ಯವಿಲ್ಲದಷ್ಟು ತಂಪಾಗಿರುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸನತ್ ಕುಮಾರ್, ಪವನ್‌ರಾಜ್, ಸಂದೀಪ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News