ಚೆಂಬರಿಕ ಖಾಜಿ ನಿಗೂಢ ಸಾವಿನ ಕುರಿತ ಸಮಗ್ರ ತನಿಖೆ ನಡೆಸಬೇಕು: ಕುಟುಂಬಸ್ಥರು, ಜನಪರ ಕ್ರಿಯಾ ಸಮಿತಿ

Update: 2016-04-28 10:02 GMT

ಕಾಸರಗೋಡು, ಎ. 28 :  ಮಂಗಳೂರು - ಚೆಂಬರಿಕ ಖಾಜಿ ಸಿ. ಎಂ ಅಬ್ದುಲ್ಲ ಮೌಲವಿ ಯವರ ನಿಗೂಢ ಸಾವಿನ ಕುರಿತ ಸಮಗ್ರ ತನಿಖೆ ನಡೆಸಬೇಕು , ಸತ್ಯಾಂಶವನ್ನು  ಬಯಲಿಗೆ ತರುವಂತೆ ಒತ್ತಾಯಿಸಿ ಖಾಝಿಯವರ ಕುಟುಂಬಸ್ಥರು ಮತ್ತು ಜನಪರ ಕ್ರಿಯಾ ಸಮಿತಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ  ಮುಂದಾಗಿದೆ.

ಎಪ್ರಿಲ್ 30 ರಂದು  ಸಂಜೆ ಮೂರು  ಗಂಟೆಗೆ ಹೊಸಬಸ್  ನಿಲ್ದಾಣ ಪರಿಸರದಲ್ಲಿ ನಡೆಯುವ ಸತ್ಯಾಗ್ರಹವನ್ನು ಪರಿಸರ ಹೋರಾಟಗಾರ  ಸಿ. ಆರ್ ನೀಲಕಂಟನ್  ಉದ್ಘಾಟಿಸುವರು .

ರಾಜಕೀಯ , ಸಾಮಾಜಿಕ , ಸಾಂಸ್ಕೃತಿಕ , ಧಾರ್ಮಿಕ  ಮುಖಂಡರು  ಪಾಲ್ಗೊಳ್ಳುವರು. ಘಟನೆ ನಡೆದು ಆರು ವರ್ಷ ಕಳೆದರೂ ನೈಜ ಕಾರಣ ಇನ್ನೂ ಹೊರಬಂದಿಲ್ಲ . ಸೂಕ್ತ ತನಿಖೆ ನಡೆದಿಲ್ಲ . ಸಮಗ್ರ ತನಿಖೆ ನಡೆಸುವಂತೆ  ಒತ್ತಾಯಿಸಲು  ಹೋರಾಟ ನಡೆಸಲಾಗುವುದು ಎಂದು ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ  ಸಮಿತಿ ಅಧ್ಯಕ್ಷ  ಡಾ . ಡಿ  ಸುರೇಂದ್ರನಾಥ್ , ಸಿದ್ದಿಕ್ ನದ್ವಿ , ಸಿ . ಎಂ ಮುಹಮ್ಮದ್ ಶಾಫಿ  ಮೊದಲಾದವರು  ಉಪಸ್ಥಿತರಿದ್ದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News