ಮಂಗಳೂರು: ಒಂದೂವರೆ ಕೋಟಿ ವಂಚಿಸಿದ ಆರೋಪಿ ಬಂಧನ

Update: 2016-04-28 17:30 GMT

ಮಂಗಳೂರು,ಎ.28: ಗಿಲ್‌ಮೆಲ್ ಎಂಬ ಸಾಪ್ಟ್‌ವೇರ್ ಕಂಪೆನಿಯಲ್ಲಿ ಸಿಇಓ ಆಗಿದ್ದ ಲಕ್ಷ್ಮೀಕಾಂತ್ ಎಂಬಾತನನ್ನು ಒಂದೂವರೆ ಕೋಟಿ ವಂಚನೆ ಆರೋಪದಲ್ಲಿ ಕದ್ರಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಲಕ್ಷ್ಮೀಕಾಂತ್ ನಗರದ ಬಿಕರ್ನಕಟ್ಟೆಯಲ್ಲಿ ಕಾರ್ಯಾಚರಿಸುತ್ತಿದ್ದ ಸಾಪ್ಟ್‌ವೇರ್ ಕಂಪೆನಿಯಲ್ಲಿ ಸಿಇಓ ಆಗಿದ್ದುಕೊಂಡು ಕಂಪೆನಿಯ ಅಭಿವೃದ್ದಿಯ ಹೆಸರಿನಲ್ಲಿ ಕಂಪೆನಿಯ ಮಾಲಕರಿಂದ 1.5 ಕೊಟಿ ಹಣವನ್ನು ಪಡೆದುಕೊಂಡು ಪರಾರಿಯಾಗಿದ್ದ.ಅಲ್ಲದೆ ಈತ ಇದೇ ಕಂಪೆನಿಯ ಸಿಬ್ಬಂದಿಗಳ ಹಣವನ್ನು ಪಡೆದುಕೊಂಡು ವಂಚಿಸಿದ್ದ ಎಂಬ ಆರೋಪವಿತ್ತು.

ಕದ್ರಿ ಪೊಲೀಸರು ಆರೋಪಿಯನ್ನು ಇಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಯನ್ನು ಹದಿನೈದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.ಕದ್ರಿ ಪೊಲೀಸ್ ಇನ್ಸ್‌ಪೆಕ್ಟರ್ ಮಾರುತಿ ನಾಯಕ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News