ಮಂಗಳೂರು: ವೀಸಾ ನೀಡುವುದಾಗಿ 1.25 ಲಕ್ಷ ರೂ ವಂಚನೆ

Update: 2016-04-28 17:28 GMT

ಮಂಗಳೂರು,ಎ.28 ಯು ಎಸ್ ಎ ಯಲ್ಲಿ ಉದ್ಯೋಗ ಪಡೆಯಲು ವೀಸಾ ನೀಡುವುದಾಗಿ ಹೇಳಿಕೊಂಡ ವ್ಯಕ್ತಿಯೊಬ್ಬರು ಸುರತ್ಕಲ್ ನ ಕಟ್ಲದ ನಿವಾಸಿ ರಮೇಶ್ ಮೆಂಡನ್ ಎಂಬವರಿಗೆ ರೂ.1,25,570 ರೂ ವಂಚಿಸಿದ ಘಟನೆ ನಡೆದಿದೆ.


     ರಮೇಶ್ ಮೆಂಡನ್ ಅವರಿಗೆ ಎ.16ರಂದು ಪೋನ್ ಮಾಡಿದ ಥೊಮಸ್ ಎಲ್ ವಜಾದ ಎಂಬವರು ತಾನು ಭಾರತದಲ್ಲಿ ಅಮೇರಿಕಾದ ರಾಯಭಾರಿ ಹಾಗೂ ಮಿ. ಡೆವಿಡ್ ವೈಟ್ ಹೆಚ್ ಆರ್ ಮೆನೆಜರ್ ಎಂದು ಪರಿಚಯಿಸಿಕೊಂಡಿದ್ದರು. ಯುಎಸ್‌ಎ ಯಲ್ಲಿ ಆಯಿಲ್ ಆ್ಯಂಡ್ ಗ್ಯಾಸ್ ಕಂಪೆನಿಯಲ್ಲಿ ಉದ್ಯೋಗ ಇದೆ ಎಂದು ಹೇಳಿ ವೀಸಾ ರಿಜಿಸ್ಟ್ರೇಷನ್‌ಗೆ ರೂ.43720 ನೀಡುವಂತೆ ಸೂಚಿಸಿದ್ದನು. ಅದರಂತೆ ರಮೆಶ್ ಮೆಂಡನ್ ಅವರು ಸುರತ್ಕಲ್ ಕಾರ್ಪೋರೇಶನ್ ಬ್ಯಾಂಕಿನಲ್ಲಿ ಹಣವನ್ನು ಥೋಮಸ್ ಎಲ್ ವಜಾದ ಸೂಚಿಸಿದ ಅಕೌಂಟ್‌ಗೆ ಹಾಕಿದ್ದರು.


  ಎ.23 ಕ್ಕೆ ಮತ್ತೆ ಕರೆ ಮಾಡಿದ ಆತ ಎಂಪ್ಲೋಯ್‌ಮೆಂಟ್ ಅಥೋರೈಸೇಸನ್ ಅಪ್ರೂವಲ್ ಫೀಸ್ ಆಗಿ ರೂ. 81850 ನೀಡುವಂತೆ ಸೂಚಿಸಿದ್ದನು. ಅದರಂತೆ ರಮೇಶ್ ಮೆಂಡನ್ ಹಣವನ್ನು ಕಾರ್ಪೋರೇಶನ್ ಬ್ಯಾಂಕಿನ ಸುರತ್ಕಲ್ ಶಾಖೆಯಲ್ಲಿ ಪಾವತಿಸಿದ್ದರು.


ಇಷ್ಟಕ್ಕೆ ಸುಮ್ಮನಾಗದ ಥೋಮಸ್ ಎಲ್ ವಜಾದ ಎ.25 ರಂದು ಮತ್ತೆ ಪೋನ್ ಮಾಡಿ 1,40,500 ಪಾವತಿಸುವಂತೆ ಸೂಚಿಸಿದ್ದು ಅನುಮಾನಗೊಂಡ ರಮೇಶ್ ಮೆಂಡನ್ ಸುರತ್ಕಲ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸುರತ್ಕಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News