ಮೊಗರ್ಪಣೆ ಮಸೀದಿಯ ಖಾಝಿ ಸ್ವೀಕಾರ

Update: 2016-04-28 18:19 GMT

ಸುಳ್ಯ, ಎ.28: ಮೊಗರ್ಪಣೆಯ ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಆಶ್ರಯದಲ್ಲಿ ಫಝಲ್ ಹಾಮಿದ್ ಕೋಯಮ್ಮ ತಂಙಳ್ ಅಲ್‌ಬುಖಾರಿ ಕೂರತ್‌ರಿಂದ ಖಾಝಿ ಸ್ವೀಕಾರ ಸಮಾರಂಭ ನಡೆಯಿತು. ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಖಾಝಿ ಸ್ಥಾನ ನೀಡಿದರು.
ಈ ಸಂದರ್ಭ ಹಝ್ರತ್ ವಲಿಯುಲ್ಲಾಹಿ ಮಾಂಬಿಳಿ ತಂಙಳ್‌ರ ವಾರ್ಷಿಕ ದ್ಸಿಕ್ರ್ ಹಲ್‌ಖ ಕಾರ್ಯಕ್ರಮ ನಡೆಯಿತು. ಮಂಞಂಪ್ಪಾರ ಮಜ್ಲಿಸ್ ಅಧ್ಯಕ್ಷ ಶೈಖುನಾ ಮುಹಮ್ಮದ್ ಅಶ್ರಫ್ ಸಖಾಫಿ ನೇತೃತ್ವ ವಹಿಸಿದರು. ಸುಲೈಮಾನ್ ಫಾಝಿಲಿ ದುಆ ನೆರವೇರಿಸಿದರು. ಅಬ್ದುಲ್ ವಹಾಬ್ ಸಖಾಫಿ ಮಂಬಾಡ್ ಮುಖ್ಯ ಭಾಷಣ ಮಾಡಿದರು.
 ಸಮಾರಂಭದಲ್ಲಿ ಜಮಾಅತ್ ಅಧ್ಯಕ್ಷ ಅಬ್ದುಲ್ ರಶೀದ್ ಕಮ್ಮಾಡಿ ಅಶ್ರಫ್ ಕಾಮಿಲ್ ಸಖಾಫಿ, ಸೈಯದ್ ಹಾಶಿಮ್ ತಂಙಳ್ ಕಣ್ಣೂರು, ಕುಂಞಿಕೋಯ ಸಅದಿ ತಂಙಳ್, ಸಲಾಹುದ್ದೀನ್ ಸಖಾಫಿ, ಸುಲೈಮಾನ್ ಫಾಝಿಲಿ, ಯೂಸುಫ್ ಕೂರತ್, ಎಸ್.ಎಂ. ಮುಹಮ್ಮದ್, ಎಸ್. ಅಬ್ದುಲ್ಲಾ, ಮುಹಮ್ಮದ್ ಕುಂಞಿ ಗೂನಡ್ಕ, ಅಬ್ಬಾಸ್ ಕಟ್ಟೆಕ್ಕಾರ್, ಕೆ.ಹಸನ್, ಎಸ್. ಶಂಸುದ್ದೀನ್, ಕೆ.ವೈ.ಉಸ್ಮಾನ್, ಹಸೈನಾರ್ ಜಯನಗರ, ಅಬ್ದುಸ್ಸಮದ್, ಲತೀಫ್ ಸಿಲಿಕಾನ್, ಬಿ.ಎಸ್.ಶರೀಫ್, ಎಸ್. ಸಂಶುದ್ದೀನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News