ಕಾಸರಗೋಡಿನಲ್ಲಿ ಬರ ಪರಿಸ್ಥಿತಿ; ತುರ್ತು ಕ್ರಮ ಕೈಗೊಳ್ಳಲು ಉಮ್ಮನ್ ಚಾಂಡಿ ಸೂಚನೆ

Update: 2016-04-28 18:26 GMT

ಕಾಸರಗೋಡು , ಎ.28: ಜಿಲ್ಲೆಯಲ್ಲಿ ಬರಗಾಲ ಮತ್ತು ಉಪ್ಪುನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಕೂಡಲೇ ತುರ್ತು ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಕಾಸರಗೋಡು ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದಾರೆ.

ಬರ ಸಮಸ್ಯೆ ಹಿನ್ನೆಲೆಯಲ್ಲಿ ತಿರು ವನಂತಪುರದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಅಗತ್ಯವಿರುವ ಕೊಳವೆ ಬಾವಿಗಳನ್ನು ಕೊರೆಯಲಾಗುವುದು. ಇದಕ್ಕಾಗಿ ಇಂದಿ ನಿಂದಲೇ ತುರ್ತು ಕ್ರಮಕ್ಕೆ ಆದೇಶ ನೀಡಲಾಗಿದೆ. ಕಾಸರಗೋಡು ನಗರ ಮತ್ತು ಸುತ್ತಮುತ್ತ ಪ್ರದೇಶಗಳಿಗೆ ಪಯಸ್ವಿನಿ ಹೊಳೆಯಿಂದ ಪೂರೈಕೆ ಮಾಡುವ ಕುಡಿಯುವ ನೀರು ಉಪ್ಪುಮಿಶ್ರಿತವಾಗಿದ್ದು, ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆಂದು ಆದೇಶ ನೀಡಲಾಯಿತು.
ಉಪ್ಪುನೀರು ಪೂರೈಕೆಯಾಗುತ್ತಿರುವುದರಿಂದ ಕೂಡಲೇ ಕೊಳವೆ ಬಾವಿ ಕೊರೆದು ನೀರು ಸರಬರಾಜು ಮಾಡಲಾಗುವುದು. ಬಿಸಿಲಾಘಾತದಿಂದ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಲಾಯಿತು.
ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕಂದಾಯ ಸಚಿವ ಅಡೂರು ಪ್ರಕಾಶ್, ಕಾಸರಗೋಡು ಸೇರಿದಂತೆ ರಾಜ್ಯದ 3 ಜಿಲ್ಲೆಗಳು ತೀವ್ರ ಬರಗಾಲ ಎದುರಿಸುತ್ತಿದ್ದು, ಕೇರಳವನ್ನು ‘ಬರಪೀಡಿತ ರಾಜ್ಯ’ವನ್ನಾಗಿ ಘೋಷಿಸುವಂತೆ ಕೇಂದ್ರ ಸರಕಾರವನ್ನು ಸಭೆ ಒತ್ತಾಯಿಸಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News