ಕಾಪು: 39 ನೆ ಹಿರಿಯರರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್‌ಶಿಪ್‌ ಪಂದ್ಯಕ್ಕೆ ಚಾಲನೆ

Update: 2016-04-28 18:35 GMT

ಕಾಪುವಿನಲ್ಲಿ ಗುರುವಾರ ಆರಂಭವಾದ 39 ನೇ ಹಿರಿಯರರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್‌ಪ್‌ನ ಪುರುಷರ ವಿಭಾಗದಲ್ಲಿ ಪಂಜಾಬ್ ಮತ್ತು ಬಿಹಾರ ತಂಡದಮಧ್ಯೆ ಪಂದ್ಯ ನಡೆಯಿತು.

ಕಾಪು, ಎ.28: ಕಾಪುವಿದ್ಯಾನಿಕೇತನ ಮೈದಾನದಲ್ಲಿ ಗುರುವಾರ ಆರಂಭಗೊಂಡ 39ನೆ ಹಿರಿಯರ ರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್‌ಶಿಪ್‌ನ ಪುರುಷರ 'ಎಚ್' ಬಣದ ಮೊದಲ ಪಂದ್ಯದಲ್ಲಿ ಗುಜರಾತ್ ತಂಡವು ಜಾರ್ಖಂಡ್ ತಂಡವನ್ನು 2-1 ಸೆಟ್‌ಗಳಿಂದ ಸೊಲಿಸಿತು.

ಗುಜರಾತ್ ತಂಡ ಜಾರ್ಖಂಡ್ ತಂಡವನ್ನು 21-25, 25-19 ಹಾಗೂ 25-17 ಅಂಕಗಳಿಂದ ಜಯಗಳಿಸಿತು.


'ಬಿ' ಬಣದ ಪಂಜಾಬ್ ತಂಡವು ಬಿಹಾರ ತಂಡವನ್ನು 25-12, 25-19 ಅಂಕಗಳಿಂದ, ಏಕ ಪಕ್ಷೀಯವಾಗಿ ನಡೆದ 'ಎ' ಬಣದ ಮಧ್ಯಪ್ರದೇಶಮತ್ತು ದಿಲ್ಲಿ ತಂಡಗಳ ನಡುವಿನ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವು 25-6, 25-6 ಅಂಕಗಳಿಂದ ವಿಜಯಿಯಾಯಿತು.


 ಬಣದ ಪಂದ್ಯದಲ್ಲಿ ರಾಜಸ್ತಾನ ತಂಡವು ಚಂಡೀಗಡ ತಂಡವನ್ನು 25-16, 25-12 ಅಂಕಗಳಿಂದ ಸೋಲಿಸಿದರೆ, 'ಎಫ್' ಬಣದ ಪಂದ್ಯದಲ್ಲಿ ಮುಂಬೈ ತಂಡವು ಕೇರಳ ತಂಡವನ್ನು 25-3, 25-3 ನೇರ ಅಂತರದಿಂದ ಮಣಿಸಿತು. 'ಸಿ' ಬಣದ ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ನಡುವಿನ ಪಂದ್ಯದಲ್ಲಿ 25-12, 25-8 ಅಂಕಗಳಿಂದ ಮಹಾರಾಷ್ಟ್ರ ತಂಡವು ಜಯಗಳಿಸಿತು. 'ಜಿ' ಬಣದ ಪಂದ್ಯದಲ್ಲಿ ಉತ್ತರಾಖಂಡ ತಂಡವನ್ನು 25-15, 25-13 ಅಂಕಗಳಿಂದ ಮಣಿಸಿದ ಮಣಿಪುರ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿತು.

ಮಹಿಳೆಯರ 'ಸಿ' ಗುಂಪಿನ ಪಂದ್ಯದಲ್ಲಿ ತಮಿಳುನಾಡು ತಂಡವು ಗೋವಾ ತಂಡವನ್ನು 25-10, 25-20 ಅಂಕಗಳಿಂದ ಜಯಗಳಿಸಿತು. 'ಎಫ್' ಗುಂಪಿನ ಪಂದ್ಯದಲ್ಲಿ ಗುಜರಾತ್ ಮಣಿಪುರ ತಂಡವನ್ನು 25-7, 25-6 ಅಂಕಗಳಿಂದ ಸೋಲಿಸಿದರೆ, 'ಜಿ' ಗುಂಪಿನಲ್ಲಿ ರಾಜಸ್ತಾನ ತಂಡವು ಕೇರಳ ತಂಡವನ್ನು 25-9, 25-1 ಅಂಕಗಳಿಂದ ಸೋಲಿಸಿ ಪಂದ್ಯದ ಮೊದಲ ಜಯ ಸಾಧಿಸಿತು.
ಮೂರು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ 27 ರಾಜ್ಯಗಳ ಪುರುಷರ 25 ಮತ್ತು ಮಹಿಳೆಯರ 24 ತಂಡಗಳು ಪಾಲ್ಗೊಂಡಿದ್ದು, ಒಟ್ಟು 116 ಪಂದ್ಯಗಳು ನಡೆಯಲಿವೆ.ಎ.30ರಂದು ಅಂತಿಮ ಪಂದ್ಯಗಳು ನಡೆಯಲಿದ್ದು, ಅಂದೇ ಪುರುಷರ ರಾಷ್ಟ್ರೀಯ ತಂಡವನ್ನು ಆಯ್ಕೆ ಮಾಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News