ಮೇ 16ರಂದು ಕಾಸರಗೋಡು ವಿಧಾನಸಭಾ ಚುನಾವಣೆ: ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ

Update: 2016-04-29 05:29 GMT

ಕಾಸರಗೋಡು, ಎ. 29:  ಕಾಸರಗೋಡು ವಿಧಾನ ಸಭಾ ಚುನಾವಣೆ ಮೇ 16 ರಂದು ನಡೆಯಲಿದ್ದು, ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. 

ಇದುವರೆಗೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 30 ನಾಮಪತ್ರಗಳು ಸಲ್ಲಿಸಲ್ಪಟ್ಟಿವೆ.

ಇಂದು ಸಂಜೆ ಮೂರು ಗಂಟೆಯ ತನಕ ನಾಮ ಪತ್ರ  ಸ್ವೀಕರಿಸಲಾಗುವುದು.  ನಾಳೆ  ಸೂಕ್ಷ್ಮ ಪರಿಶೀಲನೆ ನಡೆಯಲಿದೆ.  ಮೇ 2 ವರೆಗೆ ನಾಮಪತ್ರ ಹಿಂತೆಗೆದು ಕೊಳ್ಳಲು  ಕೊನೆ ದಿನವಾಗಿದ್ದು, ಅಂದು ಸಂಜೆ  ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ .
ಈಗಾಗಲೇ  ಪ್ರಮುಖ ಪಕ್ಷಗಳ ಮುಖಂಡರು ಜಿಲ್ಲೆಗಾಗಮಿಸಿ ಪ್ರಚಾರ ಕಾರ್ಯ ನಡೆಸಿದ್ದು , ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಹೊರಬೀಳುವುದರೊಂದಿಗೆ  ಚುನಾವಣಾ ಪ್ರಚಾರ  ಮತ್ತಷ್ಟು  ಬಿರುಸುಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News