ನೀರು ಅಗತ್ಯವಿರುವ ಪ್ರದೇಶಗಳಿಗೆ ಉಚಿತ ಸರಬರಾಜು: ಹೆಲ್ಪ್ ಇಂಡಿಯಾ ಫೌಂಡೇಶನ್

Update: 2016-04-29 08:58 GMT

ಉಳ್ಳಾಲ. ಎ, 29: ನೀರು ಅಗತ್ಯವಿರುವ ಪ್ರದೇಶಗಳಿಗೆ ನೂರು ಟ್ಯಾಂಕರ್ ನೀರನ್ನು ಉಚಿತವಾಗಿ ಸರಬರಾಜು ಮಾಡಲು ಹೆಲ್ಪ್ ಇಂಡಿಯಾ ಫೌಂಡೇಶನ್ ತಿರ್ಮಾನಿಸಿದೆ ಎಂದು ಹೆಲ್ಪ್ ಇಂಡಿಯಾ ಫೌಂಡೇಶನ್‌ನ ಸ್ಥಾಪಕ ಕಾರ್ಯದರ್ಶಿ ಅಬ್ದುಲ್ ರಾಝೀಕ್ ಉಳ್ಳಾಲ್ ಹೇಳಿದರು.

ಅವರು ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ ನಾಟೆಕಲ್‌ನ ಉರುಮಣೆ ಮಂಜನಾಡಿ ಅನ್ಸಾರ್ ನಗರ ಭಾಗಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿದ್ದು ಉಚಿತ ನೀರು ವಿತರಿಸಿ ಮಾತನಾಡಿದರು.

ಹೆಚ್ಚು ನೀರಿನ ಸಮಸ್ಯೆ ಇರುವ ಮತ್ತು ಬಡ ಕಟುಂಬಗಳು ವಾಸಿಸುವ ಮಂಜನಾಡಿಯ ಅನ್ಸಾರ್ ನಗರಗಳನ್ನು ಸರ್ವೆ ನಡೆಸಿ ಇಲ್ಲಿನ ಜನರಿಗೆ ಉಚಿತ ನೀರು ನೀಡಲಾಗುತ್ತಿದೆ. ಸರಕಾರಿ ಜಾಗದಲ್ಲಿ ವಾಸಿಸುವ ಕುಟುಂಬಗಳಿಗೆ ಹಣ ಪಾವತಿಸಿ ಟ್ಯಾಂಕರ್ ಮೂಲಕ ನೀರು ಖರಿದಿಸಲು ಸಾಧ್ಯವಾದ ಕಾರಣ ನಾವು ಈ ಕೆಲಸವನ್ನು ಮಾಡುತ್ತಿದ್ದೇವೆ. ಗ್ರಾಮ ಪಂಚಾಯತ್ ವಾರಕ್ಕೆ ಎರಡು ಭಾರಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು ಆ ನೀರು ಸಾಲದೆ ಜನರು ಕಷ್ಟಪಡುತಿರುವುದನ್ನು ಕಂಡು ನಮ್ಮ ಸಂಸ್ಥೆ ಹೆಲ್ಪ್ ಇಂಡಿಯಾ ಫೌಂಡೇಶನ್ ಉಚಿತ ನೀರು ಸರಬರಾಜು ಮಾಡಲು ಮುಂದಾಗಿದೆ ಎಂದರು.
ಹೆಲ್ಪ್ ಇಂಡಿಯಾ ಫೌಂಡೇಶನ್‌ನ ತೊಕ್ಕೊಟ್ಟು ಘಟಕ ಅಧ್ಯಕ್ಷ ತೌಸೀಫ್ ಅಹ್ಮದ್, ಕಾರ್ಯದರ್ಶಿ ಶಕೀಲ್ ತುಂಬೆಜ, ಕೋಶಾಧಿಕಾರಿ ಅಹ್ಮದ್ ಸಿರಾಜ್, ಪತ್ರಿಕ ಸಂಚಾಲಕ ಝಾಕಿರ್ ಹುಸೈನ್, ಜೊತೆ ಕಾರ್ಯದರ್ಶಿ ಯು.ಎ ಅಹ್ಮದ್, ಸದಸ್ಯರಾದ ನಿಯಾರ್ ಯು.ಪಿ, ಸುಲೈಮಾನ್, ತನ್ವೀರ್ ಹಸನ್, ಶಂಸುದ್ದೀನ್, ಮುಹಮ್ಮದ್ ಸಿರಾಜ್ ಮತ್ತಿತರರು  ಈ ಸಂದರ್ಭ ಉಪಸ್ಥಿತರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News