ಚುಟುಕು ಸುದ್ದಿಗಳು

Update: 2016-04-29 18:02 GMT

ಇಂದಿನ ಕಾರ್ಯಕ್ರಮ
ಕೃತಿಗಳ ಅನಾವರಣ: ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ವತಿಯಿಂದ ಡಾ.ಪ್ರಜ್ಞಾ ಮಾರ್ಪಳ್ಳಿಯವರ ಎರಡು ಕೃತಿಗಳ ಅನಾವರಣ. ಸಮಯ: ಸಂಜೆ 4ಕ್ಕೆ. ಸ್ಥಳ: ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನ, ಉಡುಪಿ.
 ಸಂಸ್ಥಾಪಕರ ದಿನಾಚರಣೆ: ಮಣಿಪಾಲ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಡಾ.ಟಿಎಂಎ ಪೈ ಅವರ ಜನ್ಮದಿನಾಚರಣೆ. ಬೆಳಗ್ಗೆ 8ರಿಂದ 8:45ರವರೆಗೆ ಮಣಿಪಾಲ ಮಾಧವ ವಿಹಾರ ಉದ್ಯಾನವನದ ಆ್ಯಂಪಿ ಥಿಯೇಟರ್‌ನಲ್ಲಿ ಲಕ್ಷ್ಮೀರಾವ್ ಹಾಗೂ ಮಾಯಾ ಕಾಮತ್‌ರಿಂದ ಭಜನ್, 9ರಿಂದ 10ರವರೆಗೆ ಮಣಿಪಾಲದ ಸ್ಮತಿ ಭವನದಲ್ಲಿ ವಿದ್ವಾನ್ ಮಹಾಬಲೇಶ್ವರ ಭಾಗವತ್ ಶಿಷ್ಯೆಯರಿಂದ ಸುಗಮ ಸಂಗೀತ.ಸಂಜೆ 5:30ರಿಂದ ಸಂಸ್ಥಾಪಕರ ದಿನಾಚರಣೆ. ಸ್ಥಳ: ಹೊಟೇಲ್ ವ್ಯಾಲಿವ್ಯೆನ ಚೈತ್ರಾ ಹಾಲ್,ಮಣಿಪಾಲ. ರಾಷ್ಟ್ರೀಯ ಥ್ರೋಬಾಲ್ ಟೂರ್ನಿ: ಕರ್ನಾಟಕ ಅಮೆಚೂರು ಥ್ರೋಬಾಲ್ ಸಂಸ್ಥೆ, ಉಡುಪಿ ಜಿಲ್ಲಾ ಥ್ರೋಬಾಲ್ ಸಂಸ್ಥೆ ಹಾಗೂ ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದಿರುವ ಪುರುಷರ ಮತ್ತು ಮಹಿಳೆಯರ 39ನೆ ರಾಷ್ಟ್ರೀಯ ಸೀನಿಯರ್ ಥ್ರೋಬಾಲ್ ಚಾಂಪಿಯನ್‌ಶಿಪ್‌ನ ಸಮಾರೋಪ ಸಮಾರಂಭ. ಸಮಯ: ಸಂಜೆ 4ರಿಂದ. ಸ್ಥಳ: ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಆವರಣ, ಕಾಪು.
ಉದ್ಯೋಗ ಮೇಳ: ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆಶ್ರಯದಲ್ಲಿ 2014, 2015, 2016ನೆ ಬ್ಯಾಚ್‌ನ ವಿದ್ಯಾರ್ಥಿಗಳಿಗಾಗಿ ಉಚಿತ ಉದ್ಯೋಗ ಮೇಳ. ಸಮಯ: ಬೆಳಗ್ಗೆ 10ರಿಂದ. ಸ್ಥಳ: ಎಂಐಟಿಕೆ ಆವರಣ, ಮೂಡ್ಲಕಟ್ಟೆ ಕುಂದಾಪುರ.

ನಾಳೆ ಮಳೆಗಾಗಿ ನಮಾಝ್
ಮಂಗಳೂರು, ಎ.29: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ನಗರ ಘಟಕದ ವತಿಯಿಂದ ಮೇ 1ರಂದು ಬೆಳಗ್ಗೆ 8 ಗಂಟೆಗೆ ನೆಹರೂ ಮೈದಾನದಲ್ಲಿ ಮಳೆಗಾಗಿ ನಮಾಝ್ ಮತ್ತು ಪ್ರಾರ್ಥನೆಯನ್ನು ಹಮ್ಮಿಕೊಳ್ಳಲಾಗಿದ್ದು, ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ನಾಳೆ ರಕ್ತದಾನ ಶಿಬಿರ 
ಬಂಟ್ವಾಳ, ಎ.29: ಎಸ್ಸೆಸ್ಸೆಫ್ ಬಂಟ್ವಾಳ ಡಿವಿಜನ್ ‘ಮರಳಿ ಬಾ ಪರಂಪರೆಗೆ’ ಕಾರ್ಯಕ್ರಮದ ಪ್ರಚಾರಾರ್ಥ ಎಸ್ಸೆಸ್ಸೆಫ್ ಗೂಡಿನಬಳಿ ಯುನಿಟ್ ವತಿಯಿಂದ ಮೇ 1ರಂದು ಉಚಿತ ಸುನ್ನತ್ ಕಾರ್ಯಕ್ರಮ ಹಾಗೂ ಲೇಡಿಗೋಶನ್ ಆಸ್ಪತ್ರೆ ಸಹಬಾಗಿತ್ವದಲ್ಲಿ ರಕ್ತದಾನ ಶಿಬಿರ ಗೂಡಿನಬಳಿ ಜಂಕ್ಷನ್‌ನಲ್ಲಿ ನಡೆಯಲಿದೆ. ಬೆಳಗ್ಗೆ 6ರಿಂದ ಸುನ್ನತ್ ಕಾರ್ಯಕ್ರಮ ಪ್ರಾರಂಭವಾಗಲಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 12:30ರವರೆಗೆ ರಕ್ತದಾನ ಶಿಬಿರ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಅಸ್ತಮಾ: ಮೇ 3ರಿಂದ ಉಚಿತ ಶಿಬಿರ
ಮಂಗಳೂರು, ಎ.29: ವಿಶ್ವ ಅಸ್ತಮಾ ದಿನದ ಅಂಗವಾಗಿ ನಗರದ ಎ.ಜೆ.ಆಸ್ಪತ್ರೆಯಲ್ಲಿ ಮೇ 3ರಿಂದ 10ರವರೆಗೆ ಅಸ್ತಮಾ ರೋಗಕ್ಕೆ ಸಂಬಂಧಿಸಿ ಉಚಿತ ಶಿಬಿರ ಏರ್ಪಡಿಸಲಾಗಿದೆ ಎಂದು ಚೆಸ್ಟ್ ಅಸೋಸಿಯೇಶನ್‌ನ ಕಾರ್ಯದರ್ಶಿ ಡಾ.ಅಲ್ಕಾ ಸಿ.ಭಟ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿಶ್ವದಾದ್ಯಂತ ಮೇ ಮೊದಲ ಮಂಗಳವಾರ ವಿಶ್ವ ಅಸ್ತಮಾ ದಿನ ಆಚರಿಸಲಾಗುತ್ತಿದ್ದು, ಈ ಬಾರಿ ಮೇ 3ಕ್ಕೆ ಬಂದಿದೆ. ಅಸ್ತಮಾ ಒಂದು ಗಂಭೀರ ಖಾಯಿಲೆಯಾಗಿದ್ದು, ವಿಶ್ವದಾದ್ಯಂತ 30 ಕೋಟಿಗೂ ಅಧಿಕ ಮಂದಿ ಇದರಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ 2.50 ಲಕ್ಷ ಜನ ಇದೇ ಕಾರಣದಿಂದ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಈ ರೋಗದ ಲಕ್ಷಣಗಳು ಕಂಡು ಬಂದ ತಕ್ಷಣ ಔಷಧ ತೆಗೆದುಕೊಳ್ಳುವುದು ಅಗತ್ಯ ಎಂದರು.
 ಗ್ಲೋಬಲ್ ಇನಿಶಿಯೇಟಿವ್ ಾರ್ ಅಸ್ತಮಾ ಎಂಬ ಸಂಸ್ಥೆಯು ಜನರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಚಿಕ್ಕ ಮಕ್ಕಳಿಗೆ ಬರುವ ರೋಗಗಳಲ್ಲಿ ಇದು ಒಂದು ಮುಖ್ಯರೋಗವಾಗಿದೆ. ಹೀಗಾಗಿ ಜನರು ಎಚ್ಚರಗೊಳ್ಳುವುದು ಅನಿವಾರ್ಯ ಎಂದರು. 

ಮೇ 2-9: ಉಚಿತ ತಪಾಸಣಾ ಶಿಬಿರ
 ಮಂಗಳೂರು, ಎ.29: ದೇರಳಕಟ್ಟೆ ಯೆನಪೊಯ ವೈದ್ಯಕೀಯ ಮಹಾವಿದ್ಯಾನಿಲಯದಲ್ಲಿ ವಿಶ್ವ ಅಸ್ತಮಾ ದಿನದ ಅಂಗವಾಗಿ ಮೇ2ರಿಂದ 9ರ ವರೆಗೆ ಅಸ್ತಮಾ ಖಾಯಿಲೆ ಕುರಿತು ಉಚಿತ ತಪಾಸಣಾ ಶಿಬಿರ ನಡೆಯಲಿದೆ ಎಂದು ಮಹಾವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ.ರ್ಇಾನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶಿಬಿರದಲ್ಲಿ ಅಸ್ತಮಾಕ್ಕೆ ಸಂಬಂಧಪಟ್ಟಂತೆ ಉಚಿತ ತಪಾಸಣೆ ನಡೆಯಲಿದೆ. ಹೆಚ್ಚಿನ ತಪಾಸಣೆ ಅಗತ್ಯವಿದ್ದಲ್ಲಿ ರಿಯಾಯಿತಿ ದರದ ಚಿಕಿತ್ಸೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ.ದೀಪು ಉಪಸ್ಥಿತರಿದ್ದರು.


ನಾಳೆ ಕಾರ್ಮಿಕ ದಿನಾಚರಣೆ
ಉಡುಪಿ, ಎ.29: ಉಡುಪಿ ಧರ್ಮಪ್ರಾಂತದ ಕಾರ್ಮಿಕ ಆಯೋಗ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಕಾರ್ಮಿಕರ ದಿನಾಚರಣೆಯನ್ನು ಮೇ 1ರಂದು ಅಪರಾಹ್ನ 2:30ಕ್ಕೆ ಉಡುಪಿ ಧರ್ಮಾಧ್ಯಕ್ಷರ ನಿವಾಸದ ಸಭಾಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಶಾಸಕ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಉಡುಪಿ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ವಹಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.

ಎಚ್‌ಆರ್‌ಎಸ್‌ನಿಂದ ಬರಗಾಲ ಸಂತ್ರಸ್ತರಿಗೆ ದೇಣಿಗೆ ಸಂಗ್ರಹ
ಉಡುಪಿ, ಎ.29: ಕರ್ನಾಟಕ ರಾಜ್ಯದಾದ್ಯಂತ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಕಂಡುಬಂದಿರುವ ಭೀಕರ ಬರಗಾಲದಿಂದ ಸಂತ್ರಸ್ತರಾಗಿರುವವರಿಗೆ ಸರಕಾರೇತರ ಸಂಸ್ಥೆಯಾದ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (ಎಚ್‌ಆರ್‌ಎಸ್)ಯ ಕರೆಯನ್ನು ಸ್ಪಂದಿಸಿ ಉಡುಪಿ ಜಿಲ್ಲೆಯ ಕೆಲವು ಮಸೀದಿಗಳಲ್ಲಿ ಇಂದು ಜುಮಾ ನಮಾಝ್ ನಂತರ ದೇಣಿಗೆ ಸಂಗ್ರಹಿಸಲಾಯಿತು. ಎಚ್‌ಆರ್‌ಎಸ್‌ನ ಅಧಿಕೃತ ಹೇಳಿಕೆಯಂತೆ ಅದು 50ಕ್ಕೂ ಹೆಚ್ಚಿನ ಪ್ರದೇಶಗಳ ಸರ್ವೇ ಮುಗಿಸಿದ್ದು, ತುರ್ತು ಅಗತ್ಯಕ್ಕಾಗಿ ಟ್ಯಾಂಕರ್‌ಗಳ ಮೂಲಕ ನೀರನ್ನು ಪೂರೈಸುವುದರೊಂದಿಗೆ, ಅಲ್ಲಲ್ಲಿ ಬೋರ್‌ವೆಲ್‌ಗಳನ್ನು ತೋಡುವ ಕಾರ್ಯವನ್ನು ಆರಂಭಿಸಿದೆ. ಇದಕ್ಕೆ ಲಕ್ಷಾಂತರ ರೂ.ಗಳ ಅಗತ್ಯವಿದ್ದು, ಮಾನವೀಯ ನೆಲೆಯಲ್ಲಿ ಜನರು ಗರಿಷ್ಠ ಸಹಾಯವನ್ನು ಮಾಡುವಂತೆ ಸಂಸ್ಥೆಯ ಹೇಳಿಕೆ ತಿಳಿಸಿದೆ.
ಸಹಾಯ ಮಾಡಲು ಇಚ್ಛಿಸುವವರು ಏಖಿಅಘೆಐಅ್ಕಐಅಘೆ ್ಕಉಔಐಉಊ ಖಇಐಉಖ್ಗ,  ಅಇ ್ಫ 01042200058175, ಖ್ಗಘೆಈಐಇಅಉ ಆಅಘೆಓ, ಅಘೆಎಅಔಣ್ಕಉ ಆ್ಕಅಘೆಇಏ, ಐಊಖಇ ಖ್ಗಘೆಆ0000104. ಖಾತೆಗೆ ಸಹಾಯಧನವನ್ನು ಕಳುಹಿಸುವಂತೆ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News