ಬಾವಿ ಬಿದ್ದು ಮೃತಪಟ್ಟ ಪಕ್ಷಿಕೆರೆ ನಿವಾಸಿ ಕುಟುಂಬಕ್ಕೆ ಸಹಾಯಧನ ಹಸ್ತಾಂತರ

Update: 2016-04-30 07:38 GMT

ಕಿನ್ನಿಗೋಳಿ, ಎ.30: ಆಕಸ್ಮಿಕವಾಗಿ ಬಾವಿ ಬಿದ್ದು ಮೃತಪಟ್ಟ ಪಕ್ಷಿಕೆರೆ ಕಾಪಿಕಾಡು ನಿವಾಸಿ ಪೂವಪ್ಪ ಕುಟುಂಬಕ್ಕೆ ಸ್ಥಳೀಯರು ಹಾಗೂ ಸಂಘಸಂಸ್ಥೆಗಳು ಸಹಾಯಧನ ಚೆಕ್‌ಗಳನ್ನು ಹಸ್ತಾಂತರಿಸಿದರು.

ಪಕ್ಷಿಕೆರೆ ಫ್ರೆಂಡ್ಸ್, ಎಸ್ಕೆಎಸ್ಸೆಸ್ಸೆಫ್ ಬೊಳ್ಳೂರು ಯುನಿಟ್ ಹಾಗೂ ಸ್ಥಳೀಯ ನಿವಾಸಿ ಮುಹಮ್ಮದ್ ಕುಂಞಿ ಕುಟುಂಬಸ್ಥರು ಒಟ್ಟು ಮೂರು ಲಕ್ಷ ರೂ.ಗಳ ಚೆಕ್ಕನ್ನು ಮುಹಮ್ಮದ್ ಕುಂಞಿ ಪೂವಪ್ಪ ಕುಟುಂಬಕ್ಕೆ ಹಸ್ತಾಂತರಿಸಿದರು.

ಅಲ್ಲದೆ, ಕಿನ್ನಿಗೋಳಿ ಬಸ್ ಚಾಲಕರ ಸಂಘದ ವತಿಯಿಂದ ಸುಮಾರು 20 ಸಾವಿರ ರೂ.ಗಳ ಚೆಕ್ಕನ್ನು ಸಂಘದ ಗೌರವಾಧ್ಯಕ್ಷ ಭುವನಾಭಿರಾಮ ಉಡುಪ ನೀಡಿದರು.  ಈ ಸಂಧರ್ಭ ಬಸ್ ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಬಸ್ ಚಾಲಕ ನಿರ್ವಾಹಕರ ಸಂಘದ ಅಧ್ಯಕ್ಷ ಭಾಸ್ಕರ ಪೂಜಾರಿ , ನ್ಯಾಯವಾದಿ ಶಶಿಧರ ಅಡ್ಕತ್ತಾಯ, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್ ಎಮ್. ಅಂಚನ್, ಕೆಮ್ರಾಲ್ ಗ್ರಾ. ಪಂ. ಸದಸ್ಯರಾದ ಮುಹಿಯದ್ದಿ ಪಕ್ಷಿಕೆರೆ, ಪ್ರಮೀಳಾ ಶೆಟ್ಟಿ ,ಜಯರಾಮ ಆಚಾರ್ಯ, ಸೇಸಪ್ಪ,  ಮಾಜಿ. ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಕೋರ್ದಬ್ಬು ದೈವಸ್ಥಾನದ ಅಧ್ಯಕ್ಷ ಶೀನ ಸ್ವಾಮಿ , ಗುಲಾಂ ಹುಸೈನ್, ರಮೇಶ್, ಕೋನಿ, ಸುಲೈಮಾನ್, ರಾಜೇಶ್ ಮೂಡಬಿದಿರೆ, ಮಹಮ್ಮದ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News