ಕಾಸರಗೋಡು: ರೈಲ್ವೆ ಹಳಿಯಲ್ಲಿ ಕಗ್ಗಲ್ಲು ಪತ್ತೆ

Update: 2016-04-30 10:56 GMT

ಕಾಸರಗೋಡು, ಎ.29: ನಗರದ ಹೊರವಲಯದ ಚೌಕಿ ಕಲ್ಲಂಗೈ ಸಮೀಪ ರೈಲು ಹಳಿಯಲ್ಲಿ ಕಗ್ಗಲ್ಲೊಂದು ಪತ್ತೆಯಾಗಿದ್ದು, ಸ್ಥಳೀಯರ ಸಕಾಲಿಕ ಕಾರ್ಯಾಚರಣೆಯಿಂದ ಸಂಭಾವ್ಯ ದುರಂತ ತಪ್ಪಿದೆ.

ಮೊಗ್ರಾಲ್ ಪುತ್ತೂರು ಗ್ರಾಪಂ ಕಚೇರಿಯ ಹಿಂಬದಿಯ ರೈಲ್ವೆ ಹಳಿಯಲ್ಲಿ ಶುಕ್ರವಾರ ಸಂಜೆ ಕಗ್ಗಲ್ಲು ಪತ್ತೆಯಾಗಿತ್ತು. ಪರಿಸರದ ನಿವಾಸಿಗಳು ಕೂಡಲೇ ಇದನ್ನು ತೆರವುಗೊಳಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕಲ್ಲು ಪತ್ತೆಯಾದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ದುಷ್ಕರ್ಮಿಗಳ ಕೈವಾಡವಿದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಕುಂಬಳೆ ಮತ್ತು ಮಂಜೇಶ್ವರ ದಲ್ಲೂ ಇದೇ ರೀತಿಯ ಘಟನೆ ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News