ಕಾಸರಗೋಡು: ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ

Update: 2016-04-30 12:49 GMT

ಕಾಸರಗೋಡು, ಎ.30: ಮೇ 16ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಸಲ್ಲಿಕೆಯಾಗಿರುವ ನಾಮಪತ್ರಗಳ ಸೂಕ್ಷ್ಮ ಪರಿಶೀಲನೆ ಶನಿವಾರ ನಡೆದಿದ್ದು, ಒಂದು ನಾಮಪತ್ರ ತಿರಸ್ಕೃತಗೊಂಡಿದೆ.

    ಕಾಸರಗೋಡು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕೆ. ಮನೋಹರ್‌ರ ನಾಮಪತ್ರವನ್ನು ತಿರಸ್ಕೃತಗೊಂಡಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮನೋಹರ್ ಖರ್ಚು ವೆಚ್ಚದ ಮಾಹಿತಿ ನೀಡದ ಕಾರಣ ಮುಂದೆ ಸ್ಪರ್ಧಿಸದಂತೆ ನಾಮಪತ್ರವನ್ನು ಅಂದು ಅಸಿಂಧುಗೊಳಿಸಲಾಗಿತ್ತು. ಹೀಗಾಗಿ ಈ ಬಾರಿ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ.

     ಸಲ್ಲಿಕೆಯಾದ ಇತರ ಎಲ್ಲ ನಾಮಪತ್ರಗಳು ಸಮರ್ಪಕವಾಗಿರುವುದರಿಂದ ಡಮ್ಮಿ ಅಭ್ಯರ್ಥಿಗಳ ನಾಮಪತ್ರಗಳನ್ನು ಕೈಬಿಡಲಾಯಿತು. ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕೊನೆ ದಿನವಾಗಿದ್ದು ಅಂದು ಸಂಜೆ ಒಟ್ಟು ಅಭ್ಯರ್ಥಿಗಳ ಕುರಿತು ಸ್ಪಷ್ಟ ಚಿತ್ರಣ ಹೊರಬೀಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News