ಸುಳ್ಯದಲ್ಲಿ ಟ್ರಾಕ್ಟರ್ ಮೂಲಕ ನೀರಿನ ವಿತರಣೆ ಪ್ರಾರಂಭ

Update: 2016-04-30 18:33 GMT

ಸುಳ್ಯ, ಎ.30: ನೀರಿನ ಕೊರತೆ ಹಿನ್ನೆಲೆಯಲ್ಲಿ ಸುಳ್ಯ ನಪಂ ಅಧ್ಯಕ್ಷ ಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ನಪಂನ ಕೆಲವು ವಾರ್ಡಿನ ಮನೆಗಳಿಗೆ ಟ್ಯಾಕ್ಟರ್‌ನಲ್ಲಿ ನೀರು ಕೊಡುವ ಕೆಲಸ ಪ್ರಾರಂಭಗೊಂಡಿದೆ.

ಸುಳ್ಯ ನಗರದ ಕುರುಂಜಿ ಗುಡ್ಡೆ, ಅಟಲ್‌ನಗರಕ್ಕೆ ಸುಮಾರು 2,000 ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್‌ನಲ್ಲಿ ಟ್ಯಾಕ್ಟರ್ ಮೂಲಕ ವಿತರಿಸಲಾಗುತ್ತಿದೆ. ಶುಕ್ರವಾರ ನೀರಿನ ಬೇಡಿಕೆಯ ಪ್ರಕಾರ 10 ಟ್ರಾಕ್ಟರ್‌ನಲ್ಲಿ ಸುಮಾರು 20 ಸಾವಿರ ಲೀಟರ್ ನೀರನ್ನು ವಿತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News