ಮುಂಡಗೋಡ :ಕುಡಿಯುವ ನೀರಿನ ಬವಣೆ ನೀವಾರಿಸುವಲ್ಲಿ ಪಟ್ಟಣ ಪಂಚಾಯತ ಮೇಲುಗೈ

Update: 2016-04-30 18:41 GMT

 ಮುಂಡಗೋಡ : ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸನವಳ್ಳಿ ಜಲಾಶಯದಲ್ಲಿ ಕುಡಿಯುವ ನೀರಿನ ಬವಣೆ ನಿವಾರಿಸಲು ಪಟ್ಟಣ ಪಂಚಾಯತದಿಂದ ಮೂರು ಬೋರ್‌ವೆಲ್ ಗಳನ್ನು ಕೊರೆಸಲಾಗಿದ್ದು ಮೂರು ಬೋರ್‌ವೆಲ್‌ಗಳಲ್ಲಿ ತಲಾ 6 ಇಂಚು ನೀರು ಬಿದ್ದಿರುವುದರಿಂದ ಪ.ಪಂ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರು ಮುಖ್ಯಾಧಿಕಾರಿ ಸೇರಿದಂತೆ ಪಟ್ಟಣ ಪಂಚಾಯ ನೀರು ಸರಬರಾಜ ಮಾಡುವ ಸಿಬ್ಬಂದಿ ಗಳ ಮುಖದಲ್ಲಿ ಮಂದಹಾಸ ಬೀರಿದೆ

  ಶನಿವಾರ ಸಂಜೆ ಶಾಸಕ ಶಿವರಾಮ ಹೆಬ್ಬಾರ ಪೂಜೆ ಸಲ್ಲಿಸಿ ಬೊರ್‌ವೆಲ್ ಉದ್ಘಾಟನೆ ಮಾಡಿದರು ಶಾಸಕರು ಬೋರ್ ವೆಲ್ ನ ಸ್ವೀಚ್ ಆನ್ ಮಾಡುತ್ತಿದ್ದಂತೆ ನೀರು ಚಿಮ್ಮುತ್ತ ಕೆರೆಗೆ ಸೇರಿತು. ಇನ್ನೇರಡು ದಿನಗಳಲ್ಲಿ ಪೈಪಲೈನ ಜೋಡಣೆಮಾಢಿ ಶುದ್ದ ಗೊಳಿಸಿ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ ಇದರಿಂದ ಅರ್ಧಕ್ಕೆ ಅರ್ಧದಷ್ಟು ನೀರಿನ ಬವಣೆ ನಿವಾರಣೆ ಯಾದಂತಾಗಿದೆಎಂದು ಪ.ಪಂ ಅಧ್ಯಕ್ಷ ರಫೀಕ ಇನಾಮದಾರ ಹೇಳಿದ್ದಾರೆ.

ತಾ.ಪಂ ಕಾರ್ಯನಿರ್ವಣಾಧಿಕಾರಿ ಭೈರವಾಡಗಿ,ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ, ಚಿಕ್ಕ ನೀರಾವರಿ ಎಇಇ ರಾಜಶೇಖರ, ಸಹಾಯಕ ಇಂಜನಿಯರ ಆರ್.ಎನ್.ನಾಯಕ್, ಪ.ಪಂ ಅಧ್ಯಕ್ಷ ರಫೀಕ ಇನಾಮದಾರ, ಜಿಲ್ಲಾ ಪಂಚಾಯತ ಸದಸ್ಯ ರವಿಗೌಡ ಪಾಟೀಲ,ಉಪಾಧ್ಯಕ್ಷ ಫಕ್ಕಿರಪ್ಪ ಅಂಟಾಳ, ಪ.ಪಂ ಸದಸ್ಯರಾದ ಅಲ್ಲಿಖಾನ ಪಠಾಣ, ರಾಬರ್ಟ್ ಲೋಬೊ, ಲತೀಫ ನಾಲಬಂದ ಸಂಜು ಪೀಶೆ, ಮಾಜಿ ಉಪಾಧ್ಯಕ್ಷೆ ಶಕುಂತಲಾ ತಳವಾರ, ಗೋವಿಂದ ಭೋವಿ, ತಾ.ಪಂ ಸದಸ್ಯ ಜ್ಞಾನೇಂದ್ರ, ರಾಮಣ್ಣ ಪಾಲೇಕರ, ರಾಮಣ್ಣ ಕುನ್ನೂರ, ಲಿಂಗರಾಜ ಕನ್ನೂರ,, ಮಹ್ಮದಗೌಸ ಮಕಾನದಾರ, ಜೈನು ಬೆಂಡಿಗೇರಿ, ಆಸೀಫ ಮಕಾನದಾರ, ಮಂಜು ಕಟಗಿ, ಇಫ್ರಾನ್ ಸವಣೂರಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News