ದೇಶದ ಬೃಹತ್ ನೀರಾವರಿ ಯೋಜನೆ ಡಾ.ಬಿ.ಆರ್.ಅಂಬೇಡ್ಕರರ ಚಿಂತನೆಯ ಫಲ- ಕೆ.ವಿ.ಶಿವಪ್ರಸಾದ್

Update: 2016-05-01 08:57 GMT

ಮಂಗಳೂರು ಮೇ 1:ದೇಶದಲ್ಲಿನ ಉತ್ತರ ಪ್ರದೇಶದ ದಾಮೋದರ ಕಣಿವೆ ಯೋಜನೆ ಯಾಗಲಿ ಹಿರಾಕುಡ್ ಅಣೆಕಟ್ಟು ಯೋಜನೆಗಳು ಅನುಷ್ಠಾನಗೊಳ್ಳಲು ಅಂಬೇಡ್ಕರ್ ನೀಡಿದ ಚಿಂತನೆಗಳು ಕಾರಣವಾಗಿವೆ . ಅಂಬೇಡ್ಕರರ ಚಿಂತನೆಯ ಮಾರ್ಗಗಳು ಭಿನ್ನವಾಗಿತ್ತು ಎಂದು ಚಿಂತಕ ಕೆ.ವಿ.ಶಿವ ಪ್ರಸಾದ್ ತಿಳಿಸಿದರು.
    ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆಯ ವತಿಯಿಂದ ನಗರದ ಮಂಗಳೂರು ವಿಶ್ವ ವಿದ್ಯಾನಿಲಯದ ಡಾ.ಶಿವರಾಮ ಕಾರಂತ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರ 125ನೆ ಜನ್ಮದಿನದ ಅಂಗವಾಗಿ ಶೋಷಿತರ ಚಿಂತನಾ ದಿನದ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
   

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಈ ದೇಶದ ಎಲ್ಲಾ ದುರ್ಬಲ ವರ್ಗದವರ ಪರವಾಗಿ ಹಾಗೂ ದೇಶದ ವಿವಿಧ ಕ್ಷೇತ್ರದ ಸುಧಾರಣೆಯ ಬಗ್ಗೆ ಚಿಂತಿಸಿದ ಬಹುಮುಖ ವ್ಯಕ್ತಿತ್ವದ  ಪ್ರತಿಭೆಯಾಗಿದ್ದರು .ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರುವ ನಾಯಕರಲ್ಲ ಎಂದು ಶಿವಪ್ರಸಾದ್ ತಿಳಿಸಿದರು.
 

ಜಿಲ್ಲಾ ಸಂಚಾಲಕ ಶ್ರೀಧರ್ ದಡ್ಡಲಕಾಡು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಮಾರಂಭದಲ್ಲಿ ಜಿಲ್ಲಾ ಕಾರಾಗೃಹ ಅಧೀಕ್ಷಕ ವಿ.ಕೃಷ್ಣ ಮೂರ್ತಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಮಾರಂಭದಲ್ಲಿ ಅತಿಥಿಗಳಾಗಿ ಸುರತ್ಕಲ್ ಪೊಲೀಸ್ ಠಾಣಾ ಸಬ್‌ಇನ್ಸ್‌ಪೆಕ್ಟರ್ ಎಂ.ಪೂವಪ್ಪ,ಜಯೇಂದ್ರ ಕೊಟ್ಯಾನ್,ಕೆ.ವಿ .ಶಿವಪ್ರಸಾದ್,ಚಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News