ದ.ಕ.ಜಿಲ್ಲೆಗೆ 50 ಬೆಡ್‌ಗಳ ಆಯುಷ್ ಆಸ್ಪತ್ರೆ ಮಂಜೂರು: ಯು.ಟಿ.ಖಾದರ್

Update: 2016-05-02 12:33 GMT

ಮಂಗಳೂರು, ಮೆ.2: ದ.ಕ. ಜಿಲ್ಲೆಯಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ 50 ಬೆಡ್‌ಗಳ ಆಯುಷ್ ಆಸ್ಪತ್ರೆಗೆ ಸರಕಾರವು ಆಡಳಿತಾತ್ಮಕ ಮಂಜೂರಾತಿ ನೀಡಿದೆ ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ 50 ಸೆಂಟ್ಸ್ ಜಾಗದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಲಿದೆ. ಕೇಂದ್ರ ಸರಕಾರ ಶೇ. 60 ಮತ್ತು ರಾಜ್ಯ ಸರಕಾರದ ಶೇ. 40 ಅನುದಾನದಲ್ಲಿ, 9 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ. ಈ ಯೋಜನೆ ಪೂರ್ಣಗೊಂಡರೆ ರಾಜ್ಯದಲ್ಲಿ ಪ್ರಥಮವಾಗಿ ಅಲೋಪತಿ ಮತ್ತು ಆಯುಷ್ ವಿಭಾಗದ ಚಿಕಿತ್ಸಾ ಸೌಲಭ್ಯಗಳು ಒಂದೇ ಕೇಂದ್ರದಲ್ಲಿ ದೊರೆಯಲಿದೆ ಎಂದು ಖಾದರ್ ತಿಳಿಸಿದರು.

ಮೇ 12ರಂದು ಆಸ್ಪತ್ರೆಯ ಒಪಿಡಿ ಬ್ಲಾಕ್‌ನ್ನು ಆರಂಭಿಸಲಾಗುವುದು. ಈ ಆಸ್ಪತ್ರೆಗೆ 58 ಹುದ್ದೆಗಳು ರಾಜ್ಯ ಸರಕಾರದಿಂದ ಮಂಜೂರಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಎಚ್.ಖಾದರ್, ಫಾರೂಕ್ ತುಂಬೆ, ಜಿಲ್ಲಾ ಆಯುಷ್ ಅಧಿಕಾರಿ ಡಾ.ದೇವದಾಸ್, ಆಯುಷ್ ವಿಶೇಷ ಅಧಿಕಾರಿ ಡಾ.ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News