ಕಾಸರಗೋಡು ಜಿಲ್ಲೆ: 46 ಅಭ್ಯರ್ಥಿಗಳು ಕಣದಲ್ಲಿ

Update: 2016-05-02 18:47 GMT

ಕಾಸರಗೋಡು, ಮೇ 2: ಕೇರಳ ವಿಧಾನಸಭೆಗೆ ಮೇ 16ರಂದು ನಡೆಯಲಿರುವ ಚುನಾವಣೆಗೆ ಕಾಸರಗೋಡು ಜಿಲ್ಲೆಯ 5 ಕ್ಷೇತ್ರಗಳಲ್ಲಿ 46 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 8, ಕಾಸರಗೋಡಿನಲ್ಲಿ 7, ಉದುಮದಲ್ಲಿ 10, ಕಾಞಂಗಾಡ್‌ನಲ್ಲಿ 12 ಮತ್ತು ತ್ರಿಕ್ಕರಿಪುರದಲ್ಲಿ 9 ಮಂದಿ ಕಣದಲ್ಲಿದ್ದಾರೆ.
ನಾಲ್ವರು ಹಾಲಿ ಶಾಸಕರಾದ ಮಂಜೇಶ್ವರದಿಂದ ಪಿ.ಬಿ. ಅಬ್ದುರ್ರಝಾಕ್, ಕಾಸರಗೋಡಿನಿಂದ ಎನ್.ಎ.ನೆಲ್ಲಿಕುನ್ನು, ಉದುಮದಿಂದ ಕೆ. ಕುಂಞಿರಾಮನ್, ಕಾಞಂಗಾಡ್‌ನಿಂದ ಇ. ಚಂದ್ರಶೇಖರನ್ ಕೂಡಾ ಕಣಕ್ಕಿಳಿದಿದ್ದಾರೆ.
ಜಿಲ್ಲೆಯ ಐದು ಕ್ಷೇತ್ರಗಳ ಅಭ್ಯರ್ಥಿಗಳ ವಿವರ
*ಮಂಜೇಶ್ವರ:
ಪಿ..ಬಿ.ಅಬ್ದುರ್ರಝಾಕ್ (ಮುಸ್ಲಿಂ ಲೀಗ್ ಐಕ್ಯರಂಗ), ಸಿ.ಎಚ್.ಕುಞಾಂಬು (ಸಿಪಿಎಂ), ರವಿಚಂದ್ರ (ಬಿಎಸ್‌ಪಿ), ಕೆ. ಸುರೇಂದ್ರನ್ (ಬಿಜೆಪಿ), ಬಶೀರ್ ಅಹ್ಮದ್ ಎಸ್.ಎಂ. (ಪಿಡಿಪಿ), ಜಾನ್ ಡಿಸೋಜ ಐ., ಮುನೀರ್ ಕೆ., ಕೆ. ಸುಂದರ (ಪಕ್ಷೇತರರು).
*ಕಾಸರಗೋಡು:
 ಎನ್.ಎ.ನೆಲ್ಲಿಕುನ್ನು (ಮುಸ್ಲಿಂ ಲೀಗ್ ಐಕ್ಯರಂಗ), ರವೀಶ ತಂತ್ರಿ (ಬಿಜೆಪಿ), ವಿಜಯಕುಮಾರ್ ಬಿ. (ಬಿಎಸ್‌ಪಿ), ಡಾ.ಎ.ಎ. ಅಮೀನ್ (ಐಎನ್‌ಎಲ್ ಎಡರಂಗ), ಎ.ದಾಮೋದರ, ಮುನೀರ್, ರೋಶನ್ ಕುಮಾರ್ (ಪಕ್ಷೇತರರು).
  *ಉದುಮ: ಕೆ. ಕುಂಞಿರಾಮನ್ (ಸಿಪಿಎಂ), ಕೆ. ಶ್ರೀಕಾಂತ್(ಬಿಜೆಪಿ), ಕೆ. ಸುಧಾಕರನ್ (ಕಾಂಗ್ರೆಸ್), ಗೋಪಿ ಕುದಿರೆಕಲ್ (ಪಿಡಿಪಿ), ಮುಹಮ್ಮದ್ ಪಾಕ್ಯರ್ (ಎಸ್‌ಡಿಪಿಐ), ಬಿ. ಅಲಿನ್ ತಾಯೆ, ಅಬ್ಬಾಸ್ ಮುದಲಪ್ಪಾರ, ಕೆ. ಕುಂಞಿರಾಮನ್, ದಾಮೋದರ ಪಿ., ಸುಧಾಕರನ್ (ಪಕ್ಷೇತರರು).

*ಕಾಞಂಗಾಡ್: ಚಂದ್ರನ್ ಪರಪ್ಪ(ಬಿಎಸ್‌ಪಿ), ಇ.ಚಂದ್ರಶೇಖರನ್ (ಸಿಪಿಐ), ಧನ್ಯಾ ಸುರೇಶ್ (ಕಾಂಗ್ರೆಸ್), ಹಸೈನಾರ್ ಮುಟ್ಟತಲ (ಪಿಡಿಪಿ), ಬಾಲಚಂದ್ರ ಕರಿಂಬಿಲ್ (ಶಿವಸೇನೆ), ಎಂ.ಪಿ.ರಾಘವನ್ (ಬಿಡಿಜೆ ಎಸ್‌ಎನ್‌ಡಿಎ), ರಾಘವನ್ ಬಿ.ಪುಡಟಕಲ್, ಕೆ.ಯು. ಕೃಷ್ಣ ಕುಮಾರ್, ಎಂ. ದಾಮೋದರನ್, ಬಾಲಕೃಷ್ಣ ಕೂಕಾಲ್, ಮುಹಮ್ಮದ್ ವಿ.ವಿ., ಸಜೀವನ್ ಆರ್. (ಪಕ್ಷೇತರರು).
*ತ್ರಿಕ್ಕರಿಪುರ: ಕೆ.ಪಿ.ಕುಂಞಿಕಣ್ಣನ್ (ಕಾಂಗ್ರೆಸ್), ಭಾಸ್ಕರನ್ ಎಂ. (ಬಿಜೆಪಿ), ಎಂ.ರಾಜಗೋಪಾಲ್ (ಸಿಪಿಎಂ), ಸಿ.ಎಚ್.ಮುತ್ತಲಿಬ್(ವೆಲ್ಫೇರ್ ಪಾರ್ಟಿ), ಎಂ.ವಿ. ಶೌಕತಲಿ (ಎಸ್‌ಡಿಪಿಐ), ಕೆ.ಪಿ.ಕುಂಞಿಕಣ್ಣನ್, ಕುಂಞಿಕಣ್ಣನ್ ಪಿ.ಎಂ., ಪುರುಷೋತ್ತಮನ್ ಪಿ.ಪಿ., ಕೆ. ಎಂ.ಶ್ರೀಧರನ್ (ಪಕ್ಷೇತರರು).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News