ಪುತ್ತೂರು: ತಂಪೆರೆದ ಮಳೆರಾಯ

Update: 2016-05-03 14:55 GMT

ಪುತ್ತೂರು, ಮೇ 3: ಪುತ್ತೂರಿನ ಗಡಿಭಾಗಗಳಾದ ಈಶ್ವರಮಂಗಲ, ಪಳ್ಳತ್ತೂರು ಸೇರಿದಂತೆ ಗ್ರಾಮೀಣ ಪ್ರದೇಶದ ಹಲವು ಕಡೆಗಳಲ್ಲಿ ಮಂಗಳವಾರ ಸಂಜೆ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ.

ಗ್ರಾಮೀಣ ಪ್ರದೇಶಗಳಾದ ಪೆರ್ಲಂಪಾಡಿ, ಕೊಳ್ತಿಗೆ, ಕಾವು, ಈಶ್ವರಮಂಗಲ, ಪಳ್ಳತ್ತೂರು ಮತ್ತಿತರ ಕಡೆಗಳಲ್ಲಿ ಸಂಜೆ ಸುಮಾರು 5 ಗಂಟೆಯ ವೇಳೆಗೆ ಗುಡುಗು ಸಹಿತ ಸುಮಾರು 20 ನಿಮಿಷಗಳ ಕಾಲ ಮಳೆ ಸುರಿದು ಬಿಸಿಯೇರಿದ ಧರೆಗೆ ತಂಪೆರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News