ನಾಳೆ ಅರ್ಜೆಂಟೀನಾದ ಸಂಸ್ಥೆಯ ಜೊತೆ ಯೆನೆಪೊಯ ವಿವಿ ಒಡಂಬಡಿಕೆಗೆ ಸಹಿ

Update: 2016-05-03 18:52 GMT

ಮಂಗಳೂರು, ಮೇ3: ಅರ್ಜೆಂಟೀನಾದ ಇಕ್ವಿಪೊ ಅರ್ಜೆಂಟಿನೊ ಆಂತ್ರೊ ಪೋಲಜಿಯ ಫಾರೆನ್ಸ್ (ಇಎಎಎಫ್)ನ ಫಾರೆನ್ಸಿಕ್ ಅಂತ್ರೊಪಾಲಜಿ ಘಟಕದ ಜತೆ ಯೆನೆಪೊಯ ವಿಶ್ವವಿದ್ಯಾನಿಲಯ ಮೇ 5ರಂದು ಒಡಂಬಡಿಕೆಯೊಂದಕ್ಕೆ ಸಹಿ ಹಾಕಲಿದೆ. ಬೆಳಗ್ಗೆ 10ಕ್ಕೆ ಯೆನೆಪೊಯ ಮೆಡಿಕಲ್ ಕಾಲೇಜಿನ ಇಂಡೋರ್ ಆಡಿ ಟೋರಿಯಂನಲ್ಲಿ ಕಾರ್ಯಕ್ರಮ ನಡೆಯಲಿದೆ. ಸಮಾರಂಭದಲ್ಲಿ ಭಾರತದಲ್ಲಿರುವ ಅರ್ಜೆಂಟೀನಾ ರಾಯಭಾರ ಕಚೇರಿಯ ಮುಖ್ಯಸ್ಥ ಜಿಯೊರ್ಜಿನಾ ಫೆರ್ನಾಂಡಿಸ್ ಡೆಸ್ಟೆಫನೊ ಭಾಗವಹಿಸಲಿದ್ದಾರೆ. ವಿಪತ್ತಿನ ಸಂದರ್ಭ ಸಾವಿಗೀಡಾಗುವವರನ್ನು ಅವರ ಕುಟುಂಬಸ್ಥರು ಗುರುತಿಸಲು ನೆರವು ನೀಡುವ ವಿಶ್ವವಿಖ್ಯಾತ ಸಂಸ್ಥೆ ಇಎಎಎಫ್ ಆಗಿದೆ. ಎರಡು ವರ್ಷಗಳಿಂದ ಯೆನೆಪೊಯ ಮೆಡಿಕಲ್ ಕಾಲೇಜಿನಲ್ಲಿ ಫಾರೆನ್ಸಿಕ್ ಅಂತ್ರೊಪಾಲಜಿಯಲ್ಲಿ ಸ್ನಾತ ಕೋತ್ತರ ಡಿಪ್ಲೊಮಾ ವಿಶೇಷ ಶಿಕ್ಷಣವನ್ನು ಆರಂಭಿಸಲಾಗಿದೆ. ಇಎಎಎಫ್‌ನ ಸಂಪನ್ಮೂಲ ವ್ಯಕ್ತಿಗಳಿಂದ ವಿಪತ್ತು ಸಂತ್ರಸ್ತರ ಪತ್ತೆ ಎಂಬ ಮಾದರಿ ತರಬೇತಿಯ ಮೂಲಕ, ವಿಪತ್ತು ಘಟಿಸಿದ ಸ್ಥಳದಿಂದ ಸಾಕ್ಷ ಸಂಗ್ರಹ ಮತ್ತು ವರದಿ ಮಾಡುವ ಬಗ್ಗೆ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಒಡಂಬಡಿಕೆಗೆ ಎರಡು ಸಂಸ್ಥೆಗಳು ಪರಸ್ಪರ ಸಹಿ ಹಾಕುವ ಮೂಲಕ ಫಾರೆನ್ಸಿಕ್ ಅಂತ್ರೊಪಾಲಜಿ ಕ್ಷೇತ್ರದಲ್ಲಿ ಪರಸ್ಪರ ಗುಣಮಟ್ಟ ವೃದ್ಧಿ ಹಾಗೂ ತರಬೇತಿ ವಿಷಯದಲ್ಲಿ ದೀರ್ಘಕಾಲೀನ ಸಂಬಂಧವನ್ನು ಬೆಳೆಸಲಿದೆ ಎಂದು ಯೆನೆಪೊಯ ವೈದ್ಯಕೀಯ ಕಾಲೇಜಿನ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News