‘ವಾರಾಹಿ ಯೋಜನೆ: ಶೀಘ್ರ ನೀರಾವರಿ ಸಚಿವರ ಸಭೆ’

Update: 2016-05-03 18:53 GMT

ಉಡುಪಿ, ಮೇ 3: ವಾರಾಹಿ ನೀರಾವರಿ ಯೋಜನಾ ಪ್ರದೇಶದ ಜನರ ಹಾಗೂ ರೈತರ ನೀರಿನ ಸಮಸ್ಯೆಗಳನ್ನು ಬಗೆ ಹರಿಸಲು ಶೀಘ್ರವೇ ನೀರಾವರಿ ಸಚಿ ವರ ಅಧ್ಯಕ್ಷತೆಯಲ್ಲಿ ಸಭೆಯೊಂದನ್ನು ಕರೆಯುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಪ್ರಕಟಿಸಿದ್ದಾರೆ. ಜಿಲ್ಲೆಯ ಜನರು ಅದರಲ್ಲೂ ಮುಖ್ಯ ವಾಗಿ ರೈತರು ಎದುರಿಸುತ್ತಿರುವ ಕುಡಿ ಯುವ ನೀರು, ಡೀಮ್ಡ್ ಅರಣ್ಯ, ಕುಮ್ಕಿ ಹಕ್ಕು, ಮರಳು, 94 ಸಿಸಿ ಸಮಸ್ಯೆಗಳು ಹಾಗೂ ಮನೆ ನಿವೇಶನ ಒದಗಿಸುವ ಬಗ್ಗೆ ಮಣಿಪಾಲದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯ ರೈತರು ವಾರಾಹಿ, ಭೂಮಿ ಹಕ್ಕು ಹಾಗೂ ಮರಳುಗಾರಿಕೆಯಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರವಾಗಿ ಸಚಿವರ ಮುಂದಿರಿಸಿದ ವಿಧಾನಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಜನರಿಗೆ ವಿಳಂಬವಿಲ್ಲದೆ ನ್ಯಾಯ ಕೊಡಿಸುವ ವ್ಯವಸ್ಥೆಯಾ ಗಬೇಕೆಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ 275 ಎಕರೆ ಭೂಮಿ ಯನ್ನು ಒಂದೂವರೆ ವರ್ಷದಲ್ಲಿ ವಸತಿ ನಿವೇಶನಕ್ಕೆ ಮೀಸಲಿರಿಸಲಾಗಿದೆ. ಉಡುಪಿಯಲ್ಲಿ 25 ಎಕರೆ, ಬ್ರಹ್ಮಾವರ ದಲ್ಲಿ 46 ಎಕರೆ, ಕಾರ್ಕಳದಲ್ಲಿ 36, ಕುಂದಾಪುರದಲ್ಲಿ 15, ಬೈಂದೂರಿನಲ್ಲಿ 4 ಎಕರೆ ಸೇರಿ ಒಟ್ಟು 126 ಎಕರೆ ಕಳೆದ ಒಂದು ವರ್ಷದಲ್ಲಿ ಮೀಸಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಶಾಲ್ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಪಂ ಅಧ್ಯಕ್ಷ ದಿನಕರ್, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಶಾಸಕ ಸುನೀಲ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News