ಉಪ್ಪಿನಂಗಡಿಯಲ್ಲಿ ಸಮಸ್ತ ಸಮ್ಮೇಳನ

Update: 2016-05-04 08:09 GMT

 ಉಪ್ಪಿನಂಗಡಿ, ಮೇ 4: ಕುಂಬ್ಳೆಯ ಬದ್ರಿಯಾ ನಗರದಲ್ಲಿರುವ ಇಮಾಂ ಶಾಫಿ ಇಸ್ಲಾಮಿಕ್ ಅಕಾಡಮಿಯ ಜಿಲ್ಲಾ ಸಮ್ಮೇಳನದ ಪ್ರಚಾರಾರ್ಥ ಸಮಸ್ತ ಸಮ್ಮೇಳನ ಹಾಗೂ ಮೂಡಿಗೆರೆ ನೂತನ ಖಾಝಿಯಾಗಿ ನೇಮಕಗೊಂಡ ಎಂ.ಎ. ಖಾಸಿಂ ಉಸ್ತಾದರಿಗೆ ಸನ್ಮಾನ ಕಾರ್ಯಕ್ರಮ ಮಂಗಳವಾರ ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿ ವಠಾರದಲ್ಲಿ ಜರಗಿತು.

ನೂತನ ಖಾಝಿ ಎಂ.ಎ. ಖಾಸಿಂ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದಕ್ಷಿಣ ಭಾರತದಾದ್ಯಂತ ಇಮಾಂ ಶಾಫಿ ಮದ್‌ಅಬ್ ಪ್ರಚಲಿತವಿದ್ದು, ಅವರ ಸ್ಮರಣೆಯ ಸಲುವಾಗಿ ಅಕಾಡಮಿಗೆ ಅವರ ಹೆಸರು ಇಡಲಾಗಿದೆ ಎಂದರು.  ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸೈಯ್ಯದ್ ಅನಸ್ ತಂಙಳ್ ಗಂಡಿಬಾಗಿಲು ದುಆ ನೆರವೇರಿಸಿ, ಪೃಕೃತಿ ಮುನಿದಿದೆ, ಮಳೆಗಾಗಿ ಪ್ರತಿಯೋರ್ವರು ಪ್ರತೀ ನಮಾಝ್ ನಲ್ಲಿ ಪ್ರಾರ್ಥನೆ ಮಾಡಬೇಕು ಎಂದರು.

ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಾಫ ಕೆಂಪಿ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬ್ ಅಬ್ದುಸ್ಸಲಾಂ ಫೈಝಿ ಎಡಪ್ಪಾಲ್, ಪರ್ಲಡ್ಕ ಜುಮಾ ಮಸೀದಿ ಮುದರ್ರಿಸ್ ಮಹಮ್ಮದ್ ಆಲಿ ದಾರಿಮಿ ಸಂದರ್ಭೋಚಿತವಾಗಿ ಮಾತನಾಡಿದರು. ನಾಸಿರ್ ಫೈಝಿ ಕೂಡತ್ತಾಯಿ ಧಾರ್ಮಿಕ ಉಪನ್ಯಾಸ ನೀಡಿದರು.

 ಸಮಾರಂಭದಲ್ಲಿ ನೂತನ ಖಾಝಿಯಾಗಿ ನೇಮಕಗೊಂಡ ಎಂ.ಎ. ಖಾಸಿಂ ಉಸ್ತಾದ್‌ರವರನ್ನು ಉಪ್ಪಿನಂಗಡಿ ಮಾಲಿಕುದ್ದೀನಾರ್ ಕೇಂದ್ರ ಜುಮಾ ಮಸೀದಿ, ಜಂಇಯ್ಯತ್ತುಲ್ ಮುಅಲ್ಲಿಮೀನ್ ಉಪ್ಪಿನಂಗಡಿ ರೇಂಜ್, ಮದ್ರಸ ಮೆನೇಜ್‌ಮೆಂಟ್ ಉಪ್ಪಿನಂಗಡಿ ರೇಂಜ್ ವತಿಯಿಂದ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಉಪ್ಪಿನಂಗಡಿ ರೇಂಜ್ ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಕೊಳ್ಳೇಜಾಲ್, ಕಡಬ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಇಬ್ರಾಹಿಂ ದಾರಿಮಿ, ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿ ಕಾರ್ಯದರ್ಶಿ ಹೆಚ್. ಯೂಸುಫ್ ಹಾಜಿ, ಕರಾಯ ಮಸೀದಿ ಅಧ್ಯಕ್ಷ ಅಶ್ರಫ್ ಹಾಜಿ, ಎಸ್.ಕೆ.ಎಸ್.ಎಸ್.ಎಫ್. ಉಪ್ಪಿನಂಗಡಿ ವಲಯ ಅಧ್ಯಕ್ಷ ಅಶ್ರಫ್ ಕೊಳ್ಳೇಜಾಲ್ ಮತ್ತಿತರರು ಉಪಸ್ಥಿತರಿದ್ದರು.

ಸಮ್ಮೇಳನ ಸ್ವಾಗತ ಸಮಿತಿ ಸಂಚಾಲಕ ಕೆ.ವಿ. ಅಬ್ದುಲ್ ಮಜೀದ್ ದಾರಿಮಿ ಸ್ವಾಗತಿಸಿದರು. ದ.ಕ. ಜಿಲ್ಲಾ ಕಾರ್ಯದರ್ಶಿ ಕೆ.ಎಚ್. ಅಶ್ರಫ್ ಹನೀಫೀ ಕರಾಯ ವಂದಿಸಿದರು. ಹಾರಿಸ್ ಕೌಸರ್ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News