ವಿವಾಹ ಕಾರ್ಯಗಳಲ್ಲಿ ದುಂದು ವೆಚ್ಚ ಮಾಡದಿರಿ: ಡಾ. ಭೀಮೇಶ್ವರ ಜೋಷಿ

Update: 2016-05-05 08:44 GMT

ಮೂಡಿಗೆರೆ, ಮೇ.5: ವಿವಾಹ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸುವುದರಿಂದ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬಹುದು. ಹಾಗೂ ಆರ್ಥಿಕ ನಷ್ಟವಾಗದಂತೆ ಎಚ್ಚರ ವಹಿಸಲು ಅನುಕೂಲ ಮಾಡಿಕೊಳ್ಳಬಹುದು ಎಂದು ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಡಾ॥ ಡಾ. ಭೀಮೇಶ್ವರ ಜೋಷಿ ಅವರು ಹೊರನಾಡು ಶ್ರೀ ಅನ್ನಪೂರ್ಣೇಶ್ವರೀ  ದೇವಸ್ಥಾನದ ಅಮೃತ ಸಭಾಭವನದಲ್ಲಿ ಶೀ ಕ್ಷೇತ್ರದ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಹಾಗೂ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾವು 1991 ರಿಂದ ಶ್ರೀ ಕ್ಷೇತ್ರದ ಧರ್ಮಕರ್ತರಾದ ಬಳಿಕ ಈತನಕ ಕಡು ಬಡ ಕುಟುಂಬಗಳನ್ನು ಗುರುತಿಸಿ 797 ಜೋಡಿಗಳ ವಿವಾಹವನ್ನು ನೆರವೇರಿಸಲಾಗಿದೆ. 442 ಬಡ ಕುಟುಂಬಗಳ ವಟುಗಳಿಗೆ ಉಪನಯನ, ಗೃಹಲಕ್ಷ್ಮಿ ಯೋಜನೆಯಡಿ 5049 ಫಲಾನುಭವಿಗಳಿಗೆ ಉಚಿತ ಹೆಂಚುಗಳ ವಿತರಣೆ ಮಾಡಲಾಗಿದೆ ಎಂದು ಹೇಳಿದರು.
 ಆನಂದ ಜ್ಯೋತಿ ಯೋಜನೆಯಡಿ 1177 ಮನೆಗಳಿಗೆ ವಿದ್ಯುತ್ ಸೌಲಭ್ಯ, ಅನ್ನದಾಸೋಹ ಯೋಜನೆಯಡಿ ರಾಜ್ಯದ ಒಟ್ಟು 1265 ಶಾಲೆಗಳಿಗೆ 1,43,497 ತಟ್ಟೆ-ಲೋಟ ವಿತರಣೆ, ಮಹಿಳಾಭಿವೃದ್ಧಿ ಯೋಜನೆಯಡಿ 295 ಫಲಾನುಭಿವಿಗಳಿಗೆ ಹೊಲಿಗೆ ಯಂತ್ರ ವಿತರಣೆ, ಧನ್ವಂತರಿ ಯೋಜನೆ, ಧಾರ್ಮಿಕ ಯೋಜನೆ, ಶೈಕ್ಷಣಿಕ ಯೋಜನೆ, ಸಾಮಾಜಿಕ ಯೋಜನೆ, ಸಾಂಸ್ಕೃತಿಕ ಯೋಜನೆ ಸೇರಿದಂತೆ ಇನ್ನಿತರ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, 11, 63 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ ಎಂದರು.
 

ನರಸಿಂಹರಾಜಪುರದ ಶ್ರೀ ಸಿಂಹನಗದ್ದೆ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ವರ್ಯ ಆಶೀರ್ವಚನ ನೀಡುತ್ತಾ ಶ್ರೀಕ್ಷೇತ್ರದ ಧರ್ಮಕರ್ತರು ಸಾರ್ವಜನಿಕವಾಗಿ ಹತ್ತು-ಹಲವು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ 25 ವರ್ಷಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಧಾರ್ಮಿಕಾ ಕ್ಷೇತ್ರದಲ್ಲಿ ಪ್ರಸಾದವನ್ನು ಸ್ವೀಕರಿಸಿದವರು ಆತ್ಮದಲ್ಲಿ ತೃಪ್ತಿಯನ್ನು ಹೊಂದುತ್ತಾರೆ. ಸಾದ್ಯವಾದಷ್ಟು ಮಟ್ಟಿಗೆ ಜೀವ ಹಿಂಸೆಯನ್ನು ಮಾಡದೇ, ನಿಮ್ಮ ಜೀವನದ ರಕ್ಷಣೆಗೆ ಮುಂದಾಗುವಂತೆ ನೂತನ ವಧೂ-ವರರಿಗೆ ಆಶೀರ್ವಚನ ನೀಡಿದ್ದರು.  

29 ಜೋಡಿ ಸಾಮೂಹಿಕ ವಿವಾಹವ:

 ಮೂಡಿಗೆರೆ ತಾಲೂಕಿನ ಶ್ರೀಕ್ಷೇತ್ರ ಹೊನಾಡಿನಲ್ಲಿ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ 29 ಜನ ದಂಪತಿಗಲು ಸತಿಪತಿಗಳಾಗಿ ಗೃಹಸ್ಥಾಶ್ರಮ ಸ್ವಿಕರಿಸಿದರು.

 ಮೂಡಿಗೆರೆ ತಾಲೂಕಿನ ಶ್ರೀ ಕ್ಷೇತ್ರ ಹೊನಾಡಿನಲ್ಲಿ ನಡೆದ ಸರಳ ಸಾಮೂಹಿಕ ವಿವಾಹ ಮತ್ತು ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News