ಮೇ 13: ಗಂಗಾ ಸಪ್ತಾಹ - ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವ

Update: 2016-05-05 09:24 GMT

ಕಡೂರು ಮೇ. 5: ತಾಲೂಕಿನ ಮಲ್ಲೇಶ್ವರ ಗ್ರಾಮದಲ್ಲಿ ಗಂಗಾ ಸಪ್ತಾಹ ಮತ್ತು ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಮೇ13 ರಂದು ನಡೆಸಲಾಗುವುದು ಎಂದು ತಾಲೂಕು ಗಂಗಾಮತಸ್ಥ ಸಮಾಜದ ಅಧ್ಯಕ್ಷ ಎಂ.ಟಿ. ಶ್ರೀನಿವಾಸ್ ತಿಳಿಸಿದರು.
 

ಅವರು ತಾಲೂಕಿನ ಮಲ್ಲೇಶ್ವರ ಗ್ರಾಮದ ಶ್ರೀ ಸ್ವರ್ಣಾಂಭ ಸಮುದಾಯಭವನದಲ್ಲಿ ನಡೆದ ಗಂಗಾ ಸಪ್ತಾಹ ಮತ್ತು ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸರ್ಕಾರ ಅಂಬಿಗರ ಚೌಡಯ್ಯ ಜಂಯತಿ ಆಚರಿಸಲು ನಿರ್ಧರಿಸಿತ್ತು. ಆದರೆ ಆ ಸಮಯದಲ್ಲಿ ಚುನಾವಣಾ ನೀತಿ ಸಂಹಿತೆ ಅಡ್ಡಿ ಬಂದ ಹಿನ್ನೆಲೆಯಲ್ಲಿ ಅಂದು ಜಯಂತಿಯನ್ನು ಸಾಕೇಂತಿಕವಾಗಿ ಆಚರಿಸಲಾಗಿತ್ತು ಎಂದರು.
 

ಈ ಎರಡು ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಚರಿಸಲು ಸಮಾಜ ನಿರ್ಧರಿಸಿದ್ದು, ಅದರಂತೆ ಶುಕ್ರವಾರ ಬೆಳಗ್ಗೆ ಶ್ರೀ ಸ್ವರ್ಣಾಂಬ ದೇವಿಯವರ ಪುಷ್ಕರಣಿಯಲ್ಲಿ ಗಂಗಾ ಪೂಜೆ ಕಾರ್ಯಕ್ರಮಗಳು ಜರುಗಲಿದೆ. ಸಂಜೆ 4 ಗಂಟೆಗೆ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.ಈ ಕಾರ್ಯಕ್ರಮದ ಸಾನಿಧ್ಯವನ್ನು ಗಂಗಾಮತಸ್ಥ ಪೀಠದ ಪೀಠಾಧಿಪತಿ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು ವಹಿಸಲಿದೆ.ಈ ಸಮಯದಲ್ಲಿ ಶ್ರೀಗಳಿಗೆ ತಾಲೂಕು ಸಮಾಜದ ವತಿಯಿಂದ ಗೌರವವಂದನೆ ಸಲ್ಲಿಸಲಾಗುವುದು ಎಂದು ಹೇಳಿದರು.
 

ಗಂಗಾಮತಸ್ಥ ಸಮಾಜವು ಅತ್ಯಂತ ಹಿಂದುಳಿದ ಸಮಾಜವಾಗಿದೆ.ಬೇರೆ ಸಮಾಜಗಳಿಗೆ ಮಠ ಮತ್ತು ಗುರು ಪೀಠವಿದೆ.ಆದರೆ ಗಂಗಾಮತ ಸಮಾಜದ ಅಭಿವೃದ್ದಿಗೆ 75 ವರ್ಷ ಹಿಂದೆಯೇ ಸಂಘ ಆರಂಭವಾಗಿದ್ದರೂ ಸಂಘಟನೆ ಕೊರತೆಯಿಂದ ಸಮಾಜ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿ ಅತಂತ್ಯ ಹಿಂದುಳಿದ ಸಮಾಜವಾಗಿರವುದು ವಿಷಾದನೀಯ ಸಂಗತಿಯಾಗಿದೆ ಎಂದರು.
 ತಾಲೂಕು ಕಾರ್ಯದರ್ಶಿ ಎಸ್.ಕೆ. ಮಲ್ಲಿಕಾರ್ಜುನ್ ಮಾತನಾಡಿ,ನಮ್ಮ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು, ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಇದುವರೆಗೂ ಸಾಧ್ಯವಾಗಿಲ್ಲ.ರಾಜ್ಯದಲ್ಲಿಅನೇಕ ಹಿಂದುಳಿದ ಸಮಾಜಗಳಿವೆ.ಅವುಗಳ ಜನಸಂಖ್ಯೆ ಮತ್ತು ಅವರ ಕುಲ ಕಸುಬುಗಳು ಹಾಗೂ ಆದಾಯದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ರಾಜ್ಯ ಸರ್ಕಾರ ಮಂಗಳೂರು ವಿಶ್ವವಿದ್ಯಾಲಯದ ಪ್ರಾಚಾರ್ಯರಾದ ಮೈತ್ರಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು ಎಂದರು.
 

ಅಂದು ರಾಜ್ಯದ ಎಲ್ಲಾ ಮುಖಂಡರನ್ನು ಸೇರಿಸಿ ಸಭೆ ನಡೆಸಿ ಸಮಾಜದ ಸ್ಥಿತಿಗತಿಯ ಬಗ್ಗೆಮೈತ್ರಿ ಅವರಿಗೆ ವರದಿ ನೀಡಿದ್ದೇವು.ಈ ವರದಿಯನ್ನು ರಾಜ್ಯದ ಜವಳಿ ಖಾತೆ ಸಚಿವ ಬಾಬುರಾವ್ ಚಿಂಚಿನಸೂರು ಪ್ರಧಾನ ಮಂತ್ರಿಗಳಿಗೆ ನೀಡಿ ಗಂಗಾಮತ್ಥ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವಂತೆ ಕೋರಿದ್ದಾರೆ ಎಂದರು.
 

ಈ ಸಂದರ್ಭ ನಿವೃತ್ತ ಆರಕ್ಷಕ ಉಪ ನಿರೀಕ್ಷಕ ಬೀರೂರು ನಾಗಪ್ಪ, ನಿಡಘಟ್ಟ ಉಮೇಶ್, ಮಚ್ಚೇರಿ ತಿಮ್ಮಯ್ಯ, ಕಲ್ಲೇಶ್ಪ, ನಾಗರಾಜು, ವಸಂತ್‌ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News