ಖಾಸಗಿ ಕೊಳವೆಬಾವಿ ಕೊರೆಯುವುದಕ್ಕೆ ನಿಷೇಧ: ಡಿಸಿ

Update: 2016-05-05 18:34 GMT

ಮಂಗಳೂರು, ಮೇ 5: ಕುಡಿಯುವ ನೀರಿನ ತೀವ್ರತೆರನಾದ ಅಭಾವದ ಹಿನ್ನೆಲೆ ಯಲ್ಲಿ ದ.ಕ. ಜಿಲ್ಲಾದ್ಯಂತ ಮೇ 31ರವರೆಗೆ ಕುಡಿಯುವ ನೀರಿನ ಉದ್ದೇಶಕ್ಕೆ ಹೊರತುಪಡಿಸಿ ಖಾಸಗಿಯಾಗಿ ಕೊಳವೆ ಬಾವಿಗಳನ್ನು ಕೊರೆಯಲು ನಿಷೇಧಿಸಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಆದೇಶಿಸಿದ್ದಾರೆ. ಸಾರ್ವಜನಿಕ ಕುಡಿಯುವ ನೀರಿನ ಮೂಲದಿಂದ 500 ಮೀ. ಅಂತರದೊಳಗೆ ಖಾಸಗಿಯವರು ಕೊಳವೆ ಬಾವಿ ಕೊರೆಯುವ ಮುನ್ನ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಸಾರ್ವಜನಿಕ ಕುಡಿಯುವ ನೀರಿನ ಮೂಲದಿಂದ 500 ಮೀ. ಅಂತರದೊಳಗೆ ಕುಡಿಯುವ ನೀರು, ಕೃಷಿ ಹಾಗೂ ಇತರ ಉದ್ದೇಶಗಳಿಗೆ ಖಾಸಗಿಯವರು ಕೊರೆದಿರುವ ಕೊಳವೆ ಬಾವಿಗಳನ್ನು ಆಳಗೊಳಿಸುವುದು ಅಥವಾ ಹೊಸ ಕೊಳವೆ ಬಾವಿಗಳನ್ನು ಕೊರೆಯುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News