ಸಂತ ಅಲೋಷಿಯಸ್ ಕಾಲೇಜಿನ ಪದವಿ ಫಲಿತಾಂಶ ಪ್ರಕಟ: ರ್ಯಾಂಕ್ ಗಳಿಕೆಯಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ

Update: 2016-05-06 17:35 GMT
B.Sc Physical Science

ಮಂಗಳೂರು, ಮೇ 6: ಸಂತ ಅಲೋಷಿಯಸ್ ಕಾಲೇಜಿನ(ಸ್ವಾಯತ್ತ) ಪದವಿ ತರಗತಿಗಳ ಸೆಮಿಸ್ಟರ್ 2,4,6ರ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ರ್ಯಾಂಕ್ ಗಳಿಕೆಯಲ್ಲಿ ಮತ್ತು ತೇರ್ಗಡೆಯಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ.

ಬಿ.ಎ. ಪದವಿಯಲ್ಲಿ ಸುವರ್ಣ ಮಲ್ಲಿಕಾ ಮಹಾದೇವ 87.14 ಶೇ. ಅಂಕ ಗಳಿಸಿ ಪ್ರಥಮ ರ್ಯಾಂಕ್, ಸ್ನೇಹಾ ಜೋಸ್ವಿಟಾ ಡಿಸೋಜ 87 ಶೇ. ಅಂಕ ಗಳಿಸಿ ದ್ವಿತೀಯ ರ್ಯಾಂಕ್, ಶ್ರುತಿ ಎ.ಎಸ್. 83.48 ಶೇ. ಅಂಕ ಗಳಿಸಿ ತೃತೀಯ ರ್ಯಾಂಕ್  ಪಡೆದಿದ್ದಾರೆ.

ಬಿಎಸ್‌ಡಬ್ಲುವಿನಲ್ಲಿ ಅನಿಲ್ ಥಾಮಸ್ 75.76 ಶೇ. ಅಂಕ ಗಳಿಸಿ ರ್ಯಾಂಕ್ ಪಡೆದಿದ್ದಾರೆ. ಬಿಎಸ್ಸಿ ಫಿಸಿಕಲ್ ಸೈಯನ್ಸ್‌ನಲ್ಲಿ ನಿಮಿತಾ ಎಸ್. ಪ್ರಭು 91.48 ಶೇ.ಅಂಕ ಗಳಿಸಿ ಪ್ರಥಮ ರ್ಯಾಂಕ್, ಅಪೂರ್ವ ಶೆಟ್ಟಿ 90.92 ಶೇ. ಅಂಕ ಗಳಿಸಿ ದ್ವಿತೀಯ ರ್ಯಾಂಕ್, ಅಮೃತ ಹೊಳ್ಳ 90.72 ಶೇ. ಅಂಕ ಗಳಿಸಿ ತೃತೀಯ ರ್ಯಾಂಕ್ ಪಡೆದಿದ್ದಾರೆ.
    ಬಿಎಸ್ಸಿ ಬಯಲಾಜಿಕಲ್ ಸೈಯನ್ಸ್‌ನಲ್ಲಿ ಪ್ರಿಯಾಂಕ ಗ್ಲಾಡಿಸ್ ಪಿಂಟೋ 88.5 ಶೇ. ಅಂಕ ಗಳಿಸಿ ಪ್ರಥಮ ರ್ಯಾಂಕ್, ನಮಿತಾ ಎಸ್.ನಾಯಕ್ 88.2 ಶೇ.ಅಂಕ ಗಳಿಸಿ ದ್ವಿತೀಯ ರ್ಯಾಂಕ್, ಮೀರಾ ಬೇಬಿ 87.62 ಶೇ. ಅಂಕಗಳಿಸಿ ತೃತೀಯ ರ್ಯಾಂಕ್ ಗಳಿಸಿದ್ದಾರೆ.

ಬಿ.ಕಾಮ್ ಪದವಿಯಲ್ಲಿ ಪೂಜಾ ಚಿದಾನಂದ ನಾಕ್(90.06) ಪ್ರಥಮ ರ್ಯಾಂಕ್, ಸಾಧಿಕ ಪಾಲ್ಕೆ (89.72)ದ್ವಿತೀಯ ರ್ಯಾಂಕ್, ಪೂಜಾ (89.56) ತೃತೀಯ ರ್ಯಾಂಕ್, ಜೆನಿತಾ ಮೊಂತೆರೋ (88.42) ನಾಲ್ಕನೆ ರ್ಯಾಂಕ್, ಕಾಲ್ವಿನ್ ಪ್ರಶಾಂತ್ ಕುನ್ಹಾ (87.16)ಐದನೆ ರ್ಯಾಂಕ್, ರೋಹನ್ ತೌರೋ (87.08) ಆರನೆ ರ್ಯಾಂಕ್ ಪಡೆದಿದ್ದಾರೆ. ಬಿಬಿಎಂ ಪದವಿಯಲ್ಲಿ ಪೊಯಿನ್ಸಿಯಾನ ಬಾಬು (89.52) ಪ್ರಥಮ ರ್ಯಾಂಕ್, ಮೇಘ (87.24) ದ್ವಿತೀಯ ರ್ಯಾಂಕ್, ಒಲಿವಿಯಾ ಫಿನೊಲ ಡಿಸೋಜ (82.82) ತೃತೀಯ ರ್ಯಾಂಕ್, ನೌಶಿಯಾ (81.48) ನಾಲ್ಕನೆ ರ್ಯಾಂಕ್ ಪಡೆದಿದ್ದಾರೆ.

ಬಿಸಿಎ ಪದವಿಯಲ್ಲಿ ದೀಕ್ಷಾ .ಜೆ. (82.42) ಪ್ರಥಮ ರ್ಯಾಂಕ್, ಸಮಂತಾ ಒಲಿವಿಯಾ ಕೊಲಾಸೊ (82.08) ದ್ವಿತೀಯ ರ್ಯಾಂಕ್, ಸುಪ್ರಿತಾ.ಎಸ್ (81.84)ತೃತೀಯ ರ್ಯಾಂಕ್ ಪಡೆದಿದ್ದಾರೆ. ಪರೀಕ್ಷೆಯಲ್ಲಿ 3,464 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರೀಕ್ಷಾ ಫಲಿತಾಂಶವನ್ನು www.staloysius.edu.inನಲ್ಲಿ ವೀಕ್ಷಿಸಬಹುದಾಗಿದೆ.

ಎರಡನೆ ಸೆಮಿಸ್ಟರ್‌ನಲ್ಲಿ ಬಿ.ಎ. ಪರೀಕ್ಷೆಯಲ್ಲಿ 77.55 ಶೇ., ಬಿಎಸ್ಸಿಯಲ್ಲಿ 83.09 ಶೇ., ಬಿ.ಕಾಮ್‌ನಲ್ಲಿ 83.99 ಶೇ., ಬಿಬಿಎಂನಲ್ಲಿ 71.16 ಶೇ., ಬಿಸಿಎ ಯಲ್ಲಿ 79.47ಶೇ. ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ನಾಲ್ಕನೆ ಸೆಮಿಸ್ಟರ್‌ನಲ್ಲಿ ಬಿ.ಎ ಪರೀಕ್ಷೆಯಲ್ಲಿ 87.91 ಶೇ,ಬಿಎಸ್ಸಿಯಲ್ಲಿ 90.11 ಶೇ., ಬಿ.ಕಾಮ್‌ನಲ್ಲಿ 94.14 ಶೇ., ಬಿಬಿಎಂನಲ್ಲಿ 80.27ಶೇ., ಬಿಸಿಎಯಲ್ಲಿ 67.33 ಶೇ. ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಆರನೆ ಸೆಮಿಸ್ಟರ್‌ನಲ್ಲಿ ಬಿ.ಎ ಪರೀಕ್ಷೆಯಲ್ಲಿ 88.37 ಶೇ., ಬಿಎಸ್‌ಡಬ್ಲುವಿನಲ್ಲಿ 100 ಶೇ., ಬಿಎಸ್ಸಿಯಲ್ಲಿ 85.28 ಶೇ., ಬಿ.ಕಾಮ್‌ನಲ್ಲಿ 95.71 ಶೇ., ಬಿಬಿಎಂನಲ್ಲಿ 78.74 ಶೇ., ಬಿಸಿಎಯಲ್ಲಿ 89.92 ಶೇ. ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News