ಮೇ 12: ನಕ್ಷತ್ರಾಕಾರದ ತಲ್ಲೂರು ಚರ್ಚ್ ಉದ್ಘಾಟನೆ

Update: 2016-05-06 18:48 GMT

ಉಡುಪಿ, ಮೇ 6: ಕುಂದಾಪುರ ತಾಲೂಕಿನ ತಲ್ಲೂರಿ ನಲ್ಲಿ ನೂತನವಾಗಿ ನಿರ್ಮಾ ಣಗೊಂಡಿರುವ ಸಂತ ಫ್ರಾನ್ಸಿಸ್ ಆಸಿಸಿಯವರ ಚರ್ಚ್‌ನ ಉದ್ಘಾಟನೆ ಮೇ 12ರಂದು ಬೆಳಗ್ಗೆ 9ಕ್ಕೆ ನಡೆಯಲಿದೆ ಎಂದು ಚರ್ಚ್‌ನ ಧರ್ಮಗುರು ರೆ.ಫಾ. ಸುನೀಲ್ ವೇಗಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನೂತನ ಚರ್ಚ್‌ನ್ನು ಉಡುಪಿ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ ಉದ್ಘಾಟಿಸಿ ಕೃತಜ್ಞತಾ ಬಲಿಪೂಜೆ ಸಮರ್ಪಿಸಲಿದ್ದಾರೆ. ಬಳಿಕ ಸಾರ್ವಜನಿಕ ಸಭಾ ಕಾರ್ಯಕ್ರಮ ಜರಗಲಿದೆ.

87 ವರ್ಷಗಳ ಇತಿಹಾಸವಿರುವ ತಲ್ಲೂರಿನ ಸಂತ ಫ್ರಾನ್ಸಿಸ್ ಆಸಿಸಿ ಚರ್ಚ್ 1928ರಲ್ಲಿ ಕುಂದಾಪುರದ ಅಂದಿನ ಧರ್ಮಗುರು ರೆ.ಫಾ. ಪೀಟರ್ ರೆಮೆಜಿಯಸ್ ಡಿಸೋಜ ತಲ್ಲೂರಿನಲ್ಲಿ ಚಿಕ್ಕ ಸ್ಥಳ ಪಡೆದು ಪುಟ್ಟ ಹುಲ್ಲಿನ ಕಟ್ಟಡ ನಿರ್ಮಿಸಿ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟರು. 1959ರಲ್ಲಿ ಜನರ ಶ್ರಮದ ಫಲವಾಗಿ ಹೊಸ ಚರ್ಚ್ ನಿರ್ಮಾಣಗೊಂಡಿತು ನೂತನ ಚರ್ಚ್‌ನಲ್ಲಿ ಏಕಕಾಲದಲ್ಲಿ 600 ಮಂದಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ. ಚರ್ಚನ್ನು ಹೊಸ ವಿನ್ಯಾಸದೊಂದಿಗೆ ನಕ್ಷತ್ರಾಕಾರದಲ್ಲಿ ನಿರ್ಮಿಸಲಾಗಿದೆ. ರಾಜ್ಯದಲ್ಲಿ ಇಂಥ ವಿನ್ಯಾಸದ ಏಕೈಕ ಚರ್ಚ್ ಇದಾಗಿದೆ ಎಂದು ರೆ.ಫಾ. ಸುನೀಲ್ ವೇಗಸ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಅರುಣ್ ಮೆಂಡೊನ್ಸಾ, ಕಾರ್ಯದರ್ಶಿ ಸ್ಟ್ಯಾನಿ ಡಿಸಿಲ್ವಾ, ಮಾಧ್ಯಮ ಸಂಚಾಲಕ ಪ್ರವೀಣ್ ಪಿರೇರಾ ಹಾಗೂ ಜೋನ್ ಮೆಂಡೊನ್ಸಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News