ಯುಡಿಎಫ್ ಮತ್ತೆ ಆಡಳಿತಕ್ಕೆ: ಸಚಿವ ರೈ

Update: 2016-05-06 18:59 GMT

ಮಂಜೇಶ್ವರ, ಮೇ 6: ಉಮ್ಮನ್ ಚಾಂಡಿ ರಾಷ್ಟ್ರದ ನಂ.1 ಮುಖ್ಯಮಂತ್ರಿಯಾಗಿದ್ದಾರೆ. ಜನಸಂಪರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರೊಂದಿಗೆ ಬೆರೆಯುವ ಓರ್ವ ಮಾದರಿ ಮುಖ್ಯಮಂತ್ರಿಯನ್ನು ಕೇರಳ ರಾಜ್ಯ ದೇಶಕ್ಕೆ ಸಮರ್ಪಿಸಿದೆ. ಈ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಯುಡಿಎಫ್ ಮತ್ತೆ ಅಧಿಕಾರಕ್ಕೇರಲಿದೆ. ಅದೇರೀತಿ ಮಂಜೇಶ್ವರದಲ್ಲಿ ಈ ಬಾರಿಯೂ ಯುಡಿಎಫ್‌ನ್ನು ಮತದಾರರು ಬೆಂಬಲಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಪೆರ್ಮುದೆಯಲ್ಲಿ ಗುರುವಾರ ನಡೆದ ಯುಡಿಎಫ್ ಅಭ್ಯರ್ಥಿ ಪಿ.ಬಿ.ಅಬ್ದುರ್ರಝಾಕ್‌ರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಕರ್ನಾಟಕ ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಯುಡಿಎಫ್ ಅಭ್ಯರ್ಥಿ ಪಿ.ಬಿ. ಅಬ್ದುರ್ರಝಾಕ್, ಯುಡಿಎಫ್ ಮುಖಂಡರಾದ ಬಿ. ಸುಬ್ಬಯ್ಯ ರೈ,ಪಿ.ಎ. ಅಶ್ರಫ್ ಅಲಿ, ಕೇಶವ ಪ್ರಸಾದ್ ನಾಣಿಹಿತ್ಲು, ಎ.ಕೆ.ಎಂ. ಅಶ್ರಫ್, ಸುಂದರ ಆರಿಕ್ಕಾಡಿ, ಟಿ.ಎ.ಮೂಸಾ, ಅಬ್ಬಾಸ್ ಮಂಗಲ್ಪಾಡಿ, ಕಾಸರಗೋಡು ಜಿಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಹನೀಫ್ ಹಾಜಿ ಪೈವಳಿಕೆ ಮತ್ತಿತರರು ಉಪಸ್ಥಿತರಿದ್ದರು.
 

ಬಿಜೆಪಿ ಗೆದ್ದರೆ ನಾಡಿಗೆ ಆಪತ್ತು: ಸಚಿವ ಜೈನ್

ಮಂಜೇಶ್ವರದಂತಹ ಜಾತ್ಯತೀತ ನಾಡಿನಲ್ಲಿ ಕೋಮುವಾದಿ ಬಿಜೆಪಿ ಗೆದ್ದರೆ ನಾಡಿಗೆ ಆಪತ್ತಾಗಲಿದೆ. ಕರ್ನಾಟಕದಲ್ಲಿ ಬಿಜೆಪಿ ಆಡಳಿತದ ಕಷ್ಟವನ್ನು ಜನ ಅನುಭವಿಸಿ ನೋಡಿಯಾಗಿದೆ. ಕೇಂದ್ರದಲ್ಲಿ ಬಿಜೆಪಿ ಆಡಳಿತದಿಂದಾಗಿ ಸಾಮಾನ್ಯ ಜನರ ಆರ್ಥಿಕ ಸ್ಥಿತಿ ಮುಗ್ಗರಿಸಿದೆ ಎಂದು ಕರ್ನಾಟಕ ಸರಕಾರದ ಯುವಜನ ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ನುಡಿದಿದ್ದಾರೆ. ಕಯ್ಯಾರಿನಲ್ಲಿ ಜರಗಿದ ಯುಡಿಎಫ್ ಅಭ್ಯರ್ಥಿ ಪಿ.ಬಿ.ಅಬ್ದುರ್ರಝಾಕ್ ಪರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 

ಯುಡಿಎಫ್‌ಗೆ ಬಹುಮತ: ಐವನ್ ವಿಶ್ವಾಸ
ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಕೇರಳದಲ್ಲಿ ಉಮ್ಮನ್‌ಚಾಂಡಿ ನೇತೃತ್ವದ ಯುಡಿಎಫ್ ಸರಕಾರ ಮತ್ತೆ ಆಡಳಿತಕ್ಕೆ ಬರಲಿದೆ. ಜನಪರ ಆಡಳಿತವನ್ನು ಜಾರಿಗೊಳಿಸುವ ಮೂಲಕ ಜನಮನ್ನಣೆ ಗಳಿಸಿರುವ ಐಕ್ಯರಂಗ ಬಹುಮತಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News