ಸಜಿಪನಡು: ಬಿಸಿಲ ಧಗೆಗೆ ಬತ್ತಿದ ಪುರಾತನ ಕೆರೆ!

Update: 2016-05-06 19:02 GMT

ಇಮ್ತಿಯಾಝ್ ಶಾ, ತುಂಬೆ

ಬಂಟ್ವಾಳ, ಮೇ 6: ದಿನೇ ದಿನೇ ಹೆಚ್ಚುತ್ತಿರುವ ಬಿಸಿಲ ಧಗೆಗೆ ಸಜಿಪನಡು ಗ್ರಾಮದ ಮುಳ್ಳಿಂಜೆಯ ಕೊಲ್ಯ ಎಂಬಲ್ಲಿರುವ ಪುರಾತನ ಕೆರೆಯಲ್ಲಿ ದಶಕದ ಬಳಿಕ ಇದೇ ಮೊದಲ ಬಾರಿಗೆ ಪೂರ್ತಿಯಾಗಿ ನೀರು ಬತ್ತಿಹೋಗಿದು, ಕೆರೆ ನೀರನ್ನು ಅವಲಂಬಿಸಿದವರು ನೀರಿಗಾಗಿ ಬವ ಣೆಪಡುವಂತಾಗಿದೆ. ಸಜಿಪನಡು ಗ್ರಾಪಂ ವ್ಯಾಪ್ತಿಯ ಸುಮಾರು 24 ಸೆಂಟ್ಸ್ ವಿಸ್ತೀ ರ್ಣವಿರುವ ಈ ಪುರಾತನ ಕೆರೆ ಯಲ್ಲಿ ನೀರು ಪೂರ್ತಿಯಾಗಿ ಬತ್ತುವುದು ಅಪರೂಪ. ಹಾಗಾಗಿ ಸ್ಥಳೀಯ ಕೃಷಿಕರು ಹಾಗೂ ನಾಗರಿಕರು ನೀರಿನ ಸಮಸ್ಯೆಯನ್ನು ಎದುರಿಸುತ್ತಿರಲಿಲ್ಲ. ಕೆರೆಯಲ್ಲಿ ನೀರಿದ್ದರೆ ಸ್ಥಳೀಯ ಬಾವಿಗಳಲ್ಲೂ ನೀರಿಗೆ ಯಾವುದೇ ಕೊರತೆಯುಂಟಾಗುತ್ತಿರಲಿಲ್ಲ. 2003ರಲ್ಲಿ ಮಳೆ ಯಿಲ್ಲದೆ ನಾಡು ಬರಕ್ಕೆ ತುತ್ತಾಗಿದ್ದ ಸಂದರ್ಭ ಈ ಕೆರೆ ಸಂಪೂರ್ಣವಾಗಿ ಬತ್ತಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ಕೆರೆ ನೀರು ಬತ್ತಿ ಹೋಗಿದೆ ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ. ಈ ಬಾರಿ ಕೆರೆ ನೀರು ಪೂರ್ತಿಯಾಗಿ ಬತ್ತಿ ಹೋಗಿರುವುದಕ್ಕೆ ಬಿಸಿಲ ಧಗೆ ಒಂದು ಕಾರಣ ವಾದರೆ, ಕೆರೆಯಲ್ಲಿ ತುಂಬಿರುವ ಭಾರೀ ಪ್ರಮಾ ಣದ ಹೂಳು ಕೂಡಾ ನೀರು ಬತ್ತಲು ಇನ್ನೊಂದು ಕಾರಣವಾಗಿದೆ. ಹೂಳಿನಿಂದಾಗಿ ಕೆರೆಯಲ್ಲಿ ನೀರಿನ ಒರತೆಯೇ ಇಲ್ಲವಾಗಿದೆ. ಈ ಕೆರೆಯ ಸಮೀಪದಲ್ಲೇ ಇರುವ ಕೆರೆಗಿಂತ ಆಳವಾಗಿರುವ ಬಾವಿಗಳಲ್ಲಿ ಈಗಾಗಲೇ ನೀರು ಬತ್ತಿದರೂ ಬಿಸಿಲ ಧಗೆಗೆ ಭೂಮಿ ಒಣಗಿ ಹೋದ ಈ ಸಮಯದಲ್ಲೂ ಕೆರೆಯ ಒಂದೆರಡು ಕಡೆ ನೀರಿನಾಂಶದಿಂದ ಮಣ್ಣು ಒದ್ದೆಯಾಗಿದೆ. ಒಂದು ವೇಳೆ ಕೆರೆಯಿಂದ ಹೂಳು ತೆಗೆದಲ್ಲಿ ಶಾಶ್ವತ ನೀರು ಲಭ್ಯವಾಗುವುದರಲ್ಲಿ ಸಂಶಯ ವಿಲ್ಲ ಎಂಬ ಮಾತು ಸ್ಥಳೀಯರಿಂದ ಕೇಳಿ ಬರುತ್ತಿವೆ.

ಐದಾರು ದಶಕಗಳ ಹಿಂದೆ ಈ ಕೆರೆಯನ್ನು ದುರಸ್ಥಿಗೊಳಿಸಿ ಅಭಿವೃದ್ಧಿಪಡಿಸಲಾಗಿತ್ತು. ಕೆರೆಯ ಹೂಳೆತ್ತಿ ಸುತ್ತ ಕಲ್ಲು ಕಟ್ಟಲಾಗಿತ್ತು. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರು ಇರುವುದರಿಂದ ಎಂತಹ ಬೇಸಿಗೆಯಲ್ಲೂ ತಮ್ಮ ತೋಟ ಹಾಗೂ ಗದ್ದೆಗಳಿಗೆ ಇದೇ ಕೆರೆಯ ನೀರನ್ನು ಬಳಸುತ್ತಿದ್ದರು. ಹಾಗೆಯೇ ಸ್ಥಳೀಯರು ಕೂಡಾ ತಮ್ಮ ದೈನಂದಿನ ಚಟುವಟಿಕೆಗೆ ಈ ಕೆರೆಯ ನೀರನ್ನು ಉಪಯೋಗಿಸುತ್ತಿದ್ದರು. ‘ಈ ಬಾರಿಯ ವಿಪರೀತ ತಾಪಮಾನದಿಂದ ಮತ್ತು ಭಾರೀ ಪ್ರಮಾಣದಲ್ಲಿ ಹೂಳು ತುಂಬಿ ರುವುದರಿಂದ ಕೆರೆಯ ನೀರು ಸಹಜವಾಗಿಯೇ ಬತ್ತಿ ಹೋಗಿದೆ. ಆದರೆ ಈ ಭಾಗದ ನಾಗರಿ ಕರಿಗೆ ಕುಡಿಯಲು ಬೋರ್‌ವೆಲ್ ನೀರಿನ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯರ ಮನವಿಯ ಮೇರೆಗೆ ಗ್ರಾಪಂ ಕೆರೆಯ ಹೂಳೆತ್ತಲು ಮುಂದಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ಹೂಳೆತ್ತುವ ಕಾರ್ಯ ವನ್ನು ತಕ್ಷಣವೇ ಕೈಗೆತ್ತಿಕೊಳ್ಳಲಾಗುವುದು’ ಎಂದು ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸಿರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News