ಹೂಳೆತ್ತುವ ಯಂತ್ರ ಹಾಗೂ ನೀರಿನ ಮಟ್ಟ

Update: 2016-05-07 16:37 GMT

ಬಂಟ್ವಾಳ, ಮೇ 7: ಮಂಗಳೂರು ಮಹಾ ನಗರಕ್ಕೆ ನೀರು ಪೂರೈಸುವ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕುಸಿದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ನದಿಯಲ್ಲಿರುವ ಬಾವಿಯನ್ನು ಮುಚ್ಚಿರುವ ಹೂಳನ್ನು ಎತ್ತಲು ಈಗಾಗಲೇ ಹೂಳೆತ್ತುವ ಯಂತ್ರವನ್ನು ನದಿಯಲ್ಲಿ ತಂದು ನಿಲ್ಲಿಸಲಾಗಿದೆ. ಸೋಮವಾರದಿಂದ ಹೂಳೆತ್ತುವ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ. ಗುರುವಾರ ತುಂಬೆ ಅಣೆಕಟ್ಟಿನಲ್ಲಿದ್ದ 5.6 ಅಡಿ ನೀರಿನ ಮಟ್ಟ ಶನಿವಾರಕ್ಕೆ 4.8ಕ್ಕೆ ಕುಸಿದಿದೆ. ಇದರಲ್ಲಿ 3 ಅಡಿಯಷ್ಟು ಹೂಳು ತುಂಬಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News