ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ-2016 ಮಹಿಳಾ ವಿಚಾರಗೋಷ್ಠಿ

Update: 2016-05-08 12:39 GMT

ಉಳ್ಳಾಲ: ನಮ್ಮ ಸಮಾಜ ನಿಜವಾಗಿಯೂ ಬದಲಾಗಿದೆಯೇ ಇಲ್ಲ.ಮರ್ಯಾದಾಗೇಡಿ ಹತ್ಯೆ ನಿಂತಿಲ್ಲ. ಧರ್ಮದಡಿಯಲ್ಲಿ ಜಾತಿ ವ್ಯವಸ್ಥೆ ಇದ್ದು ಹೆಣ್ಣನ್ನು ಸಾಂಪ್ರದಾಯಿಕವಾಗಿ ನೋಡುವ ದೃಷ್ಟಿಕೋನ ಮುಂದುವರಿದಿದೆ. ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ಮಹಿಳೆಯ ಶೋಷಣೆ ನಡೆಯುತ್ತಿದೆ. ಶಬರಿಮಲೆ ಪ್ರವೇಶಾತಿಯಲ್ಲಿಯೂ ಧಾರ್ಮಿಕ ಅಸಮಾನತೆ ಕಾಣುತ್ತಿದ್ದು ಅದು ಕೇವಲ ಹಿಂದೂ ಧರ್ಮಕ್ಕೆ ಸೀಮಿತವಾಗಿಲ್ಲ. ಇತರ ಧರ್ಮದಲ್ಲೂ ಕಾಣಬಹುದು. ಕೆಲವು ವ್ಯವಸ್ಥೆಗಳು ಮಹಿಳಾ ಅಸಮಾನತೆಗೆ ಕಾರಣವಾಗಿದೆ ಎಂದು ಡಾ.ನಿಕೇತನ ಅವರು ಅಭಿಪ್ರಾಯ ಪಟ್ಟರು.

     ಅವರು ತೊಕ್ಕೊಟ್ಟುವಿನ ಕಲ್ಲಾಪು ಯುನಿಟಿ ಸಭಾಂಗಣದಲ್ಲಿ ನಡೆಯುತ್ತಿರುವ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವದ ಕಾರ್ಯಕ್ರಮದಲ್ಲಿ ಭಾನುವಾರ ನಡೆದ ಮಹಿಳಾ ವಿಚಾರಗೋಷ್ಠಿಯಲ್ಲಿ ‘ಸಾಮಾಜಿಕ ಸಂದರ್ಭದಲ್ಲಿ ಮಹಿಳೆಎಂಬ ವಿಷಯದಲ್ಲಿ ಮಾತನಾಡಿದರು.

   ವೈಜ್ಞಾನಿಕ ಕಾಲಘಟ್ಟದಲ್ಲಿಯೂ ಮಹಿಳೆ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಬದುಕುವ ಅನಿವಾರ್ಯತೆಯಲ್ಲಿದ್ದು ಆಕೆಯ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಿಲ್ಲ, ದೇಶದೆಲ್ಲಡೆ ಕೆಲವು ಭಾಗದಲ್ಲಿ ನಡೆಯುತ್ತಿರುವ ಕೆಲವು ಹತ್ಯೆಗಳು ಮರ್ಯಾದಾ ಹತ್ಯೆ ಎಂದು ಪ್ರಚಲಿತವಿದ್ದರೂ ಅದು ಮರ್ಯಾದೆ ಹತ್ಯೆ ಅಲ್ಲ, ಮರ್ಯಾದೆಗೇಡಿ ಹತ್ಯೆ. ಯಾಕೆಂದರೆ ಮಹಿಳೆಯರ ಬದುಕು ನಿತ್ಯ ನರಕ ನಿರಂತರ ಶೋಷಣೆ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.

ಆರ್ಥಿಕವಾಗಿ ಸಬಲವಾಗಿರುವ ಕುಟುಂಬವೂ ಇನ್ನೂ ಬದಲಾವಣೆ ಬಯಸದಿರುವುದರಿಂದ ಹೆಣ್ಣಿನ ಬದುಕನ್ನು ನಿಯಂತ್ರಿಸುವ ಧರ್ಮದ ಬಗ್ಗೆ ಪುನರ್ ಚಿಂತಿಸಬೇಕಿದೆ. ಮಹಿಳಾ ಪ್ರಾತಿನಿಧ್ಯದ ಕ್ಷೇತ್ರದಲ್ಲಿ ಪುರುಷ ಪ್ರತಿನಿಧಿಗಳೆೇ ಪ್ರತಿನಿಧಿಸುತ್ತಿದ್ದಾರೆ. ಅದೆಲ್ಲವೂ ಸಾಮಾಜಿಕ ಸಂದರ್ಭದಲ್ಲಿ ಮಹಿಳೆಗೆ ಪೂರಕವಾಗಿಲ್ಲ. ಪುರುಷರ ಇಚ್ಛಾಶಕ್ತಿಯನ್ನು ತೋರಿಸುತ್ತದೆ.

ರಾಜಕೀಯ ಶಕ್ತಿಯೂ ಸಿಕ್ಕರೆ ಮಹಿಳೆ ರಾಜಕೀಯವಾಗಿ ಪ್ರಬಲರಾಗಿದ್ದರೂ ಅವರಿಗೆ ಅವಕಾಶ ಸಿಕ್ಕಿಲ್ಲ. ಮಹಿಳೆಯನ್ನು ದ್ವಿತೀಯ ದರ್ಜೆಯಲ್ಲಿಯೇ ನೋಡುತ್ತಿದ್ದಾರೆ. ಕಾಲೇಜಿನಲ್ಲಿ ಪ್ರಾಂಶುಪಾಲರ ನಿವೃತ್ತಿ ಬಳಿಕ ಪ್ರಾಂಶುಪಾಲ ವೃತ್ತಿ ಪುರುಷರು ನಾಲ್ಕು ಮಂದಿ ತಿರಸ್ಕರಿಸಿದದಾಗ ಬಂದಾಗ ಅದನ್ನು ಸ್ವೀಕರಿಸಿದೆ. ಲಿಂಗಸೂಕ್ಷ್ಮತೆ ಮನೋಭಾವ ಗೌರವಿಸುವ ಮಹಿಳೆಯರೂ ಪುರುಷರೂ ಇದ್ದಾರೆ.

ಧರ್ಮಮುಕ್ತ ಸಮಾಜ ಕಸನು, ಹೆಣ್ಣಿಗೆ ಗಂಡಿನಷ್ಟೇ ಸಮಾನ ಸ್ಥಾನ

ಮಹಿಳೆಯರಲ್ಲಿ ಆರ್ಥಿಕ ಸಬಲೀಕರಣಕ್ಕೆ ಸ್ತ್ರಿೀಶಕ್ತಿ ಸ್ವಸಹಾಯ ಗುಂಪುಗಳು ಸಹಕರಿಸಿದ್ದರೂ ಕ್ರಮೆಣ ಅದನ್ನು ಧಾರ್ಮಿಕ ಶಕ್ತಿ ನಿಯಂತ್ರಿಸಲು ಮುಂದಾದರೆ ಮಹಿಳೆ ಸ್ವಂತ ಶಕ್ತಿಯಲ್ಲಿ ನಿಲ್ಲಲು ಸಾಧ್ಯವಿಲ್ಲ. ಮಾಧ್ಯಮಗಳು ಹೆಣ್ಣನ್ನು ಭೋಗದ ಸರಕಾಗಿ ನೋಡದೆ ಆಕೆಯನ್ನು ಹೆಣ್ಣು ಎಂದೇ ಚಿತ್ರಿಸಿ ಆಕೆ ದುರ್ಬಲಳು ಅಲ್ಲ ಎಂಬುದನ್ನು ತಿಳಿಸಬೇಕು. ಪಿಎಫ್ ಕುರಿತಾಗಿ ಬೆಂಗಳೂರಿನ ಗಾರ್ಮೆಂಟ್‌ನ ನೌಕಕರು ನಡೆಸಿದ ಪ್ರತಿಭಟನೆ ಕೇಂದ್ರ ಸರಕಾರ ಒಂದೇ ದಿನದಲ್ಲಿ ಆ ಕಾನೂನನ್ನು ಹಿಂದಕ್ಕೆ ತೆಗೆದುಕೊಂಡಿರುವುದು ಮಹಿಳೆ ಮನಸ್ಸು ಮಾಡಿದರೆ ಎಂತಹ ಕ್ರಾಂತಿಕಾರಿ ಬದಲಾವಣೆ ಮಾಡಲು ಸಾಧ್ಯ ಎಂದು ನುಡಿದರು.

    ಕೌಟುಂಬಿಕ ಜೀವನದಲ್ಲಿ ಮಹಿಳೆ ಎಂಬ ವಿಷಯದಲ್ಲಿ ಮಾತನಾಡಿದ ಉಪನ್ಯಾಸಕಿ ಮರ್ಲಿನ್ ಮಾರ್ಟಿಸ್, ಹೆಣ್ಣು ಮಕ್ಕಳನ್ನು ಹುಟ್ಟುತ್ತಲೇ ಆಕೆಯನ್ನು ಕುಂಟುಬ ಎಂಬ ಸಂಸ್ಥೆಯಡಿಯಲ್ಲಿಯೇ ಬೆಳೆಸುತ್ತೇವೆ. ಗಂಡು ಮಕ್ಕಳನ್ನು ಕುಟುಂಬ ಪೋಷಿಸುವವ, ವಂಶೋದ್ಧಾರಕ ಎಂಬ ನೆಲೆಯಲ್ಲಿಯೇ ನೋಡುತ್ತಾ ಅವನಿಗೆ ಆತ್ಮವಿಶ್ವಾಸ ಬೆಳೆಸುತ್ತಾ ಹೋಗುತ್ತಿದೆ ಸಮಾಜ. ಹೆಣ್ಣು ಮಕ್ಕಳನ್ನು ನೀನು ಬೇರೆ ಮನೆಗೆ ಹೋಗುವವಳು, ಗಂಡನ ಮನೆಯಲ್ಲಿ ಎಷ್ಟೇ ಕಷ್ಟ ಕೊಟ್ಟರೂ ಸಹಿಸಬೇಕು ಎಂದು ಹೇಳಿಕೊಡುತ್ತಾ ಆಕೆಯಲ್ಲಿ ಸಹನಾ ಶಕ್ತಿ ಕೊಡುತ್ತಾ ಗಂಡನ ಮನೆಯ ಹಿಂಸೆಯನ್ನು ಸಹಿಸುತ್ತಾ ಅವಳ ಸಾವಿಗೆ ಪೋಷಕರು ಕಾರಣವಾಗುತ್ತಿದ್ದೇವೆ. ಈ ಪ್ರಕ್ರಿಯೆ ಶತಮಾನಗಳಿಂದಲೂ ನಡೆಯುತ್ತಿದ್ದು ಮಾಧ್ಯಮಗಳು ಹಾಗೂ ಪಠ್ಯಪುಸ್ತಕಗಳೂ ಕೂಡಾ ಅಷ್ಟೇ ಹೇಳಿ ಕೊಟ್ಟಿದೆ. ಪಠ್ಯ ಪುಸ್ತಕವೊಂದರಲ್ಲಿ ಲೈಮ್ ಜ್ಯೂಸ್ ಮಾಡಿಕೊಡುವ ವ್ಯಕ್ತಿ ಮುಖ ಕಾಣದಿದ್ದದರೂ ಆ ಕೈಯಲ್ಲಿ ಬಳೆಗಳು ಕಾಣಿಸುತ್ತಿದ್ದು ಕುಡಿಯುವ ಕೈಗಳಲ್ಲಿ ಏನೂ ಕಾಣಿಸುತ್ತಿಲ್ಲ. ಮಹಿಳೆಯರ ಸಂಖ್ಯೆ ಪುರುಷರಿಗಿಂತ ಕಡಿಮೆಯಾಗುತ್ತಿದೆ. ಲಿಂಗಾನುಪಾತ ಕಾಣುತ್ತಿದೆ. ಅನೇಕ ಸಮುದಾಯದಲ್ಲಿ ಮದುವೆಗೆ ಸ್ವಜಾತಿಯಲ್ಲಿ ಹೆಣ್ಣುಮಕ್ಕಳು ಸಿಗುತ್ತಿಲ್ಲ. ದೂರದ ರಾಜ್ಯದಿಂದ ಬಂದು ಇಲ್ಲಿಗೆ ಬಂದು ಕನ್ಯೆ ಹುಡುಕುತ್ತಾ ಮದುವೆ ಆಗ್ತಾರೆ. ಯುವಕ ಯುವತಿಯರ ಲಿಂಗಾನುಪಾತಕ್ಕಿಂತಲೂ 6ವರ್ಷಕ್ಕಿಂತ ಕೆಳಗಿನ ಮಕ್ಕಳ ಸಂಖ್ಯೆ ನೋಡಿದಾಗ ಸಾವಿರ ಗಂಡು ಮಕ್ಕಳಿಗೆ 952ಹೆಣ್ಣು ಮಕ್ಕಳಿದ್ದಾರೆ.

  ಕೊಲೆಯಾದ 10ಮಹಿಳೆಯ ಪೈಕಿ 9ಮಹಿಳೆ ಗಂಡನ ಕೈಯಿಂದಲೇ ಸತ್ತಿರುವದುನ್ನು ಕಾಣಬಹುದು. ಕೌಟುಂಬಿಕ ದೌರ್ಜನ್ಯ ಅವಳ ಮನಸ್ಸು ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೆಣ್ಣೊಬ್ಬಳ ಕೊಲೆಯಾದಾಗ ಅಲ್ಲಿ ಭ್ರೂಣ ಹತ್ಯೆ, ಮರ್ಯಾದೆ ಹತ್ಯೆ, ವರದಕ್ಷಿಣೆ ಕಿರುಕುಳ ಮೊದಲಾದ ಕಾರಣ ನೀಡಲಾಗುತ್ತಿದ್ದು ಒಟ್ಟಿನಲ್ಲಿ ಅಲ್ಲಿ ಹೆಣ್ಣೊಬ್ಬಳ ಕೊಲೆ ಆಗಿದೆ.

ಹೆಣ್ಣುಮಗಳಿಗೆ ತವರು ಮನೆಯಲ್ಲೊ ಒಂದು ಕೋಣೆ ತೆರೆದಿದ್ದರೆ ಆಕೆಯ ಬದುಕು ಹಸನಾಗುತ್ತದೆ. ಆಕೆಯ ಗಂಡನಿಂದ ಕಷ್ಟ ಅನುಭವಿಸುತ್ತಾ ದಿನಕಳೆಯುವ ಹಾಗಿಲ್ಲ. ಸೊಸೆಯನ್ನು ಗಂಡನ ಮನೆಯವರು ಚೆನ್ನಾಗಿ ನೋಡಿದರೆ ಆ ಮನೆಯ ಮಗಳು ಮದುವೆಯಾಗಿ ಇನ್ನೊಂದು ಮನೆ ಹೋದಾಗ ಅಲ್ಲಿ ಅತ್ತೆ ಚೆನ್ನಾಗಿ ನೋಡುತ್ತಾಳೆ . ಮಾಧ್ಯಮಗಳು ಸಮಾಜ ಸುಧಾರಿಸದ ಕುಟುಂಬಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ ಎಂದು ಹೇಳಿದರು.

 ಸಮಾರಂಭದ ಅಧ್ಯಕ್ಷತೆ ಯನ್ನು ವಿಜಯವಾಣಿ ಪತ್ರಿಕೆಯ ಸುದ್ದಿ ಸಂಪಾಕರಾದ ಭಾರತಿ ಹೆಗಡೆ ಅವರು ವಹಿಸಿದ್ದರು.

 ವಿಚಾರಗೋಷ್ಠಿಯ ನೋಡೆಲ್ ಅಧಿಕಾರಿಯಾಗಿ ಉಳ್ಳಾಲ ಪ್ರಾಮಿಕ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿ ಡಾ. ಪುಷ್ಪಲತಾ ಉಪಸ್ಥಿತರಿದ್ದರು. ರತ್ನಾವತಿ ಜೆ. ಬೈಕಾಡಿ ವಂದಿಸಿದರು. ವಿಜಯಲಕ್ಷ್ಮಿ ಶೆಟ್ಟಿ ಕಾರ್ಯಕ್ರಮ ನಡೆಸಿಕೊಟ್ಟರು.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News