ಮನಪಾ ವ್ಯಾಪ್ತಿಯಲ್ಲಿ ಟ್ಯಾಂಕರ್ ನೀರು ದರ ನಿಗದಿ

Update: 2016-05-08 14:29 GMT

ಮನಪಾ ವ್ಯಾಪ್ತಿಯಲ್ಲಿ ಟ್ಯಾಂಕರ್ ನೀರು ಸರಬರಾಜಿಗೆ ದರ ನಿಗದಿಪಡಿಸಲಾಗಿದೆ.

6000ಲೀಟರ್ ಪ್ರತೀ ಟ್ಯಾಂಕರ್ ಗೆ ರೂ.1000,9000ಲೀ-ರೂ.1300,12000 ಲೀ-ರೂ. 1500 ದರ ನಿಗದಿಪಡಿಸಲಾಗಿದೆ. ಜಿಲ್ಲಾಧಿಕಾರಿಗಳು ಆರ್.ಟಿ.ಓ ಮತ್ತು ಮನಪಾ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಟ್ಯಾಂಕರ್ ಕ್ರಮಿಸುವ ದೂರ, ಇಂಧನ, ನೀರಿನ ವೆಚ್ಚ, ಚಾಲಕನ ಭತ್ಯೆ ಮತ್ತಿತರ ಅಂಶಗಳನ್ನು ಪರಿಗಣಿಸಿ ವೈಜ್ಞಾನಿಕವಾಗಿ ಈ ದರ ನಿಗದಿಪಡಿಸಿದ್ದಾರೆ. ಇದಕ್ಕಿಂತ ಹೆಚ್ಚು ದರವನ್ನು ವಸೂಲಿ ಮಾಡಿದರೆ, ಟ್ಯಾಂಕರ್ ರಿಜಿಸ್ಟ್ರೇಷನ್ ನಂಬರ್ ಸಹಿತ ಮಹಾನಗರಪಾಲಿಕೆಗೆ ದೂರು ನೀಡುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News