ಮಡಂತ್ಯಾರು: ಮಲ್ಲವ ಸಾಮ್ರಾಜ್ಯೋತ್ಸವ ಉದ್ಘಾಟನೆ

Update: 2016-05-08 18:54 GMT

ಬೆಳ್ತಂಗಡಿ, ಮೇ 8: ಸರಳತೆಯಿಂದ ಸಜ್ಜನಿಕೆ, ಸಜ್ಜನಿಕೆಯಿಂದ ಒಳ್ಳೆಯತನ, ಒಳ್ಳೆಯತನದಿಂದ ಪ್ರೀತಿ, ವಿಶ್ವಾಸ ಗಳಿಸಬಹುದು. ಈ ಆದರ್ಶವನ್ನು ತೋರಿಸಿಕೊಟ್ಟವರು ಕೆಳದಿ ಶಿವಪ್ಪನಾಯಕರು. ಸಂಘಟನೆಯಲ್ಲಿರುವ ಕಾರ್ಯಕರ್ತರು ಅವರ ಆದರ್ಶಗಳನ್ನು ಅಳವಡಿಸಿಕೊಂಡು ಎಲ್ಲರ ವಿಶ್ವಾಸವನ್ನು ಗಳಿಸಿ ಮುಂದುವರಿಯಬೇಕು ಎಂದು ಮಲ್ಲವ ಸಾಮ್ರಾಜ್ಯದ ಗುರು ಪರಂಪರಾನುಗತ ಕೆಳದಿ ಸಂಸ್ಥಾನ ರಾಜಗುರು ಮಹಾಮತ್ತಿನ ಭುವನಗಿರಿ ಸಂಸ್ಥಾನ ಮಠಾಧ್ಯಕ್ಷ ಶಕ್ತಿ ವಿಶಿಷ್ಟಾದ್ವೈತ ವೇದಾಂತ ಆಚಾರ್ಯ ರಾಜಗುರು ಡಾ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿ ನುಡಿದರು.
ಮಡಂತ್ಯಾರು ಸಮೀಪದ ಪಾರೆಂಕಿಯ ಗಾಣದಕೊಟ್ಯ ಎಂಬಲ್ಲಿ ಮಾಳವ ಯಾನೆ ಮಲ್ಲವ ಸಮಾಜಾಭ್ಯುದಯ ಸಂಘದ ವತಿಯಿಂದ ರವಿವಾರ ನಡೆದ 20ನೆ ವರ್ಷದ ಮಲ್ಲವ ಸಾಮ್ರಾಜ್ಯೋತ್ಸವ ಉದ್ಘಾಟಿಸಿ ಅವರು ಆಶೀರ್ವದಿಸಿದರು.

ಈ ಸಂದರ್ಭ ಅವರು, 1.5 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮಲ್ಲವ ಸಭಾಭವನದ ಶಿಲಾನ್ಯಾಸ ನೆರವೇರಿಸಿದರು. ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಉಸ್ತುವಾರಿ ಸಚಿವ ರಮಾನಾಥ ರೈ ಭೇಟಿ ನೀಡಿ ಶುಭ ಹಾರೈಸಿದರು. ಮಡಂತ್ಯಾರು ಗ್ರಾಪಂ. ಅಧ್ಯಕ್ಷ ಗೋಪಾಲಕೃಷ್ಣ ಕೆ., ವಕೀಲರಾದ ಮುರಳಿ, ಹರೀಶ್ ಪೂಂಜ, ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿದರು.ವೇದಿಕೆಯಲ್ಲಿ ಜಿಪಂ ಸದಸ್ಯೆ ಮಮತಾ ಎಂ. ಶೆಟ್ಟಿ, ಜ್ಯೋತಿಷಿ ಮಂಜುನಾಥ ಭಟ್, ಮಡಂತ್ಯಾರು ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಅರವಿಂದ ಜೈನ್, ಕೆಳದಿ ಶಿವಪ್ಪನಾಯಕ ಪಡೆಯ ಮುಖ್ಯ ಕಾರುಬಾರಿ ಹೊಸಕೋಟೆ ಹಾಲಪ್ಪಗೌಡ, ಕೆಳದಿ ಮಲ್ಲವ ಸಮಾಜ ಅಧ್ಯಕ್ಷ ಮಹೇಶ್ವರಪ್ಪಗೌಡ, ಇಕ್ಕೇರಿ ಮಲ್ಲವ ಸಮಾಜಾಭ್ಯುದಯ ಸಂಘದ ಅಧ್ಯಕ್ಷ ದಯಾನಂದ, ಕಾರ್ಯದರ್ಶಿ ಜಗದೀಶ ಮಲ್ಲವ, ಬೆಳ್ತಂಗಡಿ ಮಾಳವ ಯಾನೆ ಮಲ್ಲವ ಸಮಾಜಾಭ್ಯುದಯ ಸಂಘದ ಮಾಜಿ ಅಧ್ಯಕ್ಷ ಜಿನ್ನಪ್ಪಹೆಗ್ಡೆ ಉಪಸ್ಥಿತರಿದ್ದರು.

ಮಲ್ಲವ ಸಾಮ್ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಸಂಜೀವ ಹೆಗ್ಡೆ ಉಜಿರೆ, ಉಪಾಧ್ಯಕ್ಷ ಗಣೇಶ್ ರಾವ್ ಲೇಡಿಹಿಲ್, ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ, ಸಂಘಟನಾ ಕಾರ್ಯದರ್ಶಿ ಲೋಕೇಶ್ ಚಿತ್ತಾರಿ, ಜೊತೆ ಕಾರ್ಯದರ್ಶಿ ದಯಾನಂದ ಕುದುರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಶಿವಶಂಕರ್ ಸ್ವಾಗತಿಸಿದರು. ಕಾರ್ಯದರ್ಶಿ ಮೋನಪ್ಪವರದಿ ವಾಚಿಸಿದರು. ಕೋಶಾಧಿಕಾರಿ ಸತೀಶ್ ರಾಜ್ ವಂದಿಸಿದರು. ಡಾ. ಎಚ್.ಎನ್. ಪುರಂದರ ಪ್ರಾಸ್ತಾವಿಸಿದರು. ಶಿಕ್ಷಕ ಧರಣೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News