ಬಂಟ್ವಾಳ ಕಾಮಾಜೆಯಲ್ಲಿ ಬೆಂಕಿ ಆಕಸ್ಮಿಕ: 8 ಎಕರೆ ತೆಂಗು, ಗಿಡಮರಗಳು ನಾಶ

Update: 2016-05-09 11:31 GMT

ಬಂಟ್ವಾಳ, ಮೇ 9: ಆಕಸ್ಮಿಕ ಕಾಡ್ಗಿಚ್ಚಿನಿಂದ ಜನ ವಸತಿ ಪ್ರದೇಶದಲ್ಲಿ ತೆಂಗು, ಅಡಿಕೆ ತೋಟ ಸೇರಿದಂತೆ ಸುಮಾರು 8 ಎಕರೆ ಪ್ರದೇಶದ ಗಿಡ ಮರಗಳು ಸುಟ್ಟು ಕರಕಲಾದ ಘಟನೆ ಸೋಮವಾರ ಮಧ್ಯಾಹ್ನ ಬಿ. ಮೂಡ ಗ್ರಾಮದ ಕಾಮಾಜೆ ಎಂಬಲ್ಲಿ ನಡೆದಿದೆ.

ಇಲ್ಲಿನ ದಿವಂಗತ ಪಿಳ್ಳೆ ಎಂಬವರಿಗೆ ಸೇರಿದ 8 ಎಕರೆ ಜಾಗದಲ್ಲಿ ಈ ಅವಘಡ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಪರಾಹ್ನ ಬಿಸಿಲಿನ ವೇಳೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಗಾಳಿಯ ತೀವ್ರತೆಗೆ ಬೆಂಕಿ ಇನ್ನಷ್ಟು ಪಸರಿಸಿದೆ.

ಘಟನೆಯಿಂದ ಅಪಾರ ಪ್ರಮಾಣದ ಕೃಷಿ ಮತ್ತು ಕಾಡು ನಾಶವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಬಂಟ್ವಾಳ ಅಗ್ನಿ ಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಎರಡು ಬಾರಿ ನೀರು ತರಬೇಕಾಯಿತು. ಅಲ್ಲದೆ ಬಂಟ್ವಾಳ ಪುರಸಬೆ ವ್ಯಾಪ್ತಿಗೆ ಕುಡಿಯಲು ನೀರು ಪೂರೈಸುವ ವಾಹನದಲ್ಲಿ ಕೂಡಾ ಎರಡು ಬಾರಿ ನೀರು ತಂದು ಸಿಂಪಡಿಸಲಾಯಿತು.

ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಜೊತೆ ಸ್ಥಳೀಯ ಯುವಕರು ಕೂಡಾ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News