ಕಾಸರಗೋಡು: ವ್ಯಕ್ತಿಯ ನಿಗೂಢ ಸಾವು

Update: 2016-05-09 12:33 GMT

ಕಾಸರಗೋಡು, ಮೇ 9: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಪೆರುವಾಡ್‌ನಲ್ಲಿ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ.

ಮೃತಪಟ್ಟವರನ್ನು ಕಾಸರಗೋಡು ಚೌಕಿ ಅರ್ಜಾಲ್‌ನ ನಿವಾಸಿ ರೌಫ್ (42) ಎಂದು ಗುರುತಿಸಲಾಗಿದೆ. ಸಾವಿನ ಬಗ್ಗೆ ಮನೆಯವರು ಸಂಶಯ ವ್ಯಕ್ತ ಪಡಿಸಿದ್ದರಿಂದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಸೋಮವಾರ ಮಧ್ಯಾಹ್ನ ಪೆರುವಾಡ್ ಪೆಟ್ರೋಲ್ ಪಂಪ್ ಸಮೀಪದ ರಸ್ತೆ ಬದಿ ಮೃತದೇಹ ಕಂಡುಬಂದಿದ್ದು, ಇದನ್ನು ಗಮನಿಸಿದ ಸ್ಥಳೀಯರು ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಮೃತಪಟ್ಟಿರುವುದು ಕಂಡುಬಂದಿದೆ. ಮೃತದೇಹದ ಮುಖ ಹಾಗೂ ಕಾಲಿನಲ್ಲಿ ಗಾಯಗಳು ಕಂಡುಬಂದಿವೆ.

ರವಿವಾರ ಬೆಳಗ್ಗೆ ರೌಫ್ ಮನೆಯಿಂದ ಹೊರಟಿದ್ದರು. ಚೌಕಿಯಲ್ಲಿ ಸಿಮೆಂಟ್ ಅಂಗಡಿಯೊಂದರಲ್ಲಿ ದುಡಿಯುತ್ತಿದ್ದರು. ಕೆಲವೊಮ್ಮೆ ಬಸ್ ಕಾರ್ಮಿಕನಾಗಿಯೂ ದುಡಿಯುತ್ತಿದ್ದರು ಎನ್ನಲಾಗಿದೆ. ಮೃತರ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News