ಇಂದಿನಿಂದ ಸೈಯದ್ ತ್ವಾಹಿರುಲ್ ಅಹ್ದಲ್ ತಂಙಳ್‌ರ 10ನೆ ಉರೂಸ್ ಮುಬಾರಕ್

Update: 2016-05-09 18:31 GMT

ಕಾಸರಗೋಡು, ಮೇ 9: ಝೈನುಲ್ ಮುಹಖ್ಖೀನ್ ಅಸ್ಸೈಯದ್ ತ್ವಾಹಿರುಲ್ ಅಹ್ದಲ್ ತಂಙಳ್‌ರ 10ನೆ ಉರೂಸ್ ಮುಬಾರಕ್ ಮೇ10ರಿಂದ 14 ವರೆರೆಗೆ ಕಾಸರಗೋಡು ಜಿಲ್ಲೆಯ ಪುತ್ತಿಗೆ ಮುಹಿ ಮ್ಮಾತ್ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ಉರೂಸ್ ಸಮಿತಿ ಪದಾ ಧಿಕಾರಿಗಳು ತಿಳಿಸಿದ್ದಾರೆ. ಮೇ 10ರಂದು ಬೆಳಗ್ಗೆ 6:30ಕ್ಕೆ ಸೈಯದ್ ಇಬ್ರಾಹೀಂ ಅಲ್ ಹಾದಿ ತಂಙಳ್‌ರವರ ನೇತೃತ್ವದಲ್ಲಿ ನಡೆಯುವ ತಾಜುಲ್ ಉಲಮಾ ಮಖಾಂ ಝಿಯಾರತ್‌ನೊಂದಿಗೆ ಉರೂಸ್ ಕಾರ್ಯಕ್ರಮವು ಆರಂಭವಾಗಲಿದೆ.
 ಸ್ವಾಗತ ಸಮಿತಿಯ ಚೆಯರ್‌ಮ್ಯಾನ್ ಸೈಯದ್ ಮುಹಮ್ಮದ್ ಇಬ್ರಾಹೀಂ ಪೂಕುಂಞಿ ತಂಙಳ್ ಅಲ್ ಹೈದ್ರೋಸಿ ಕಲ್ಲಕಟ್ಟ ಬೆಳಗ್ಗೆ 9:30ಕ್ಕೆ ಧ್ವಜಾರೋಹಣ ಮಾಡಲಿದ್ದಾರೆೆ. ಬಳಿಕ 10 ಗಂಟೆಗೆ ಖತ್ಮುಲ್ ಕುರ್‌ಆನ್ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬೆಳ್ಳಿಪ್ಪಾಡಿ ಅಬ್ದುಲ್ಲಾ ಮುಸ್ಲಿಯಾರ್‌ರವರ ಅಧ್ಯಕ್ಷತೆಯಲ್ಲಿ ಳಿಯಾಉಲ್ ಮುಸ್ತಫಾ ಸೈಯದ್ ಹಾಮಿದ್ ಕೋಯಮ್ಮ ತಂಙಳ್ ಮಾಟೂಲ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ರಫೀಕ್ ಸಅದಿ ದೇಲಂಪಾಡಿ ಉದ್ಬೋಧನೆಯನ್ನು ನೀಡಲಿದ್ದಾರೆ.
 ಮಧ್ಯಾಹ್ನ 2ಕ್ಕೆ ಸೈಯದ್ ಝೈನುಲ್ ಆಬಿದೀನ್ ಮುತ್ತುಕೋಯ ತಂಙಳ್ ಕಣ್ಣವಂರವರ ಪ್ರಾರ್ಥನೆಯೊಂದಿಗೆ ಪ್ರವಾಸಿ ಸಂಗಮ ಪ್ರಾರಂಭಗೊಳ್ಳಲಿದ್ದು, ಹಾಜಿ ಅಮೀರಲಿ ಚೂರಿಯ ಅಧ್ಯಕ್ಷತೆಯಲ್ಲಿ ಸೈಯದ್ ಅತಾವುಲ್ಲ ತಂಙಳ್ ಉದ್ಯಾವರ ಕಾರ್ಯಕ್ರಮಉದ್ಘಾಟಿಸುವರು. ಪ್ರವಾಸಿ ಲೋಕದ ಸಮಸ್ಯೆಗಳು ಹಾಗೂ ಪರಿಹಾರಗಳು ಎಂಬ ವಿಷಯದಲ್ಲಿ ಡಾ. ಅಬ್ದುಲ್ ಸಲಾಮ್ ಮುಸ್ಲಿ ಯಾರ್ ಉಪನ್ಯಾಸವನ್ನು ನೀಡುವರು ಎಂದು ಪದಾಧಿಕಾರಿಗಳು ತಿಳಿಸಿದರು.
    
ಪತ್ರಿಕಾಗೋಷ್ಠಿಯಲ್ಲಿ ಸೈಯದ್ ಇಬಾಹೀಂ ಪೂಕುಂಞಿ ತಂಙಳ್ ಕಲ್ಲಕಟ್ಟ, ಬಿ.ಎಸ್ ಅಬ್ದುಲ್ಲ ಕುಂಞಿ ಫೈಝಿ, ಹಾಜಿ ಅಮೀರಲಿಚೂರಿ, ಸೈಯದ್ ಮುನೀರುಲ್ ಅಹ್ದಲ್ ತಂಙಳ್, ಅಬ್ದಲ್ ರಹೀಂ ಸಖಾಫಿ ಚಿಪ್ಪಾರ್, ಮೂಸ ಸಖಾಫಿ ಕಳತ್ತೂರ್, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್ ಹಾಗೂ ಸುಲೈಮಾನ್ ಕರಿವೆಳ್ಳೂರ್ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News