ಮಹಿಳಾ ಪೊಲೀಸ್ ಠಾಣೆ ಕಾರ್ಯಾರಂಭ

Update: 2016-05-09 18:32 GMT

ಉಡುಪಿ, ಮೇ 9: ಉಡುಪಿ ನಗರ ಪೊಲೀಸ್ ಠಾಣಾ ಕಟ್ಟಡದ ಮೇಲ್ಭಾಗದಲ್ಲಿ ಮಹಿಳಾ ಪೊಲೀಸ್ ಠಾಣೆಯು ಇಂದಿನಿಂದ ಕಾರ್ಯಾ ರಂಭಗೊಂಡಿದೆ.
ಈ ಹಿಂದೆ ಮಹಿಳಾ ಪೊಲೀಸ್ ಠಾಣೆ ಕುಂದಾಪುರ ಕೇಂದ್ರ ಸ್ಥಾನ ದಲ್ಲಿದ್ದು, ಸರಕಾರದ ಆದೇಶದಂತೆ ಮಹಿಳಾ ಪೊಲೀಸ್ ಠಾಣೆಯನ್ನು ಕುಂದಾಪುರದಿಂದ ಉಡುಪಿ ಜಿಲ್ಲಾ ಕೇಂದ್ರ ಸ್ಥಾನಕ್ಕೆ ಸ್ಥಳಾಂತರಿಸಲಾಗಿದೆ. ಮಹಿಳೆಯರಿಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ಮಹಿಳಾ ಪೊಲೀಸ್ ಠಾಣೆಗೆ ನೀಡಬಹುದು.
 
ಉಡುಪಿ ನಗರ, ಮಲ್ಪೆ, ಮಣಿಪಾಲ, ಬ್ರಹ್ಮಾವರ, ಕೋಟ, ಹಿರಿಯಡ್ಕ ಠಾಣೆಗಳ ಮಹಿಳಾ ಸಂಬಂಧಿತ ಪ್ರಕರಣಗಳು ಮುಂದಕ್ಕೆ ಮಹಿಳಾ ಠಾಣಾ ವ್ಯಾಪ್ತಿಯ ಒಳಗೆ ಬರಲಿವೆ. ಠಾಣಾ ದೂ.ಸಂ.: 0820-2525559, ಉಪನಿರೀಕ್ಷಕರ ಮೊಬೈಲ್ ನಂಬರ್- 9480805458ನ್ನು ಸಂಪರ್ಕಿಸ ಬಹುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೆೇರಿಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News