ದ.ಕ. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ಕಾರ್ಯಾಗಾರ ತಜ್ಞರ ಸಮಿತಿಯಿಂದ ಸರಕಾರಕ್ಕೆ ವರದಿ: ಐವನ್

Update: 2016-05-09 18:39 GMT

ಮಂಗಳೂರು, ಮೇ 9: ದ.ಕ.ಜಿಲ್ಲೆಯಲ್ಲಿ ನೀರಿನ ನಿರ್ವಹಣೆಯಲ್ಲಿನ ನಿರ್ಲಕ್ಷದಿಂದ ನೀರಿನ ಅಭಾವ ಸೃಷ್ಟಿಯಾಗಿದ್ದು, ಈ ಬಗ್ಗೆ ಪರಿಸರ ತಜ್ಞರು, ಹಿರಿಯ ವಕೀಲರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಕಾರ್ಯಾ ಗಾರವನ್ನು ಏರ್ಪಡಿಸಿ ಸಮಗ್ರ ವರದಿಯೊಂದನ್ನು ರಚಿಸಿ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಿಗೆ ಸಲ್ಲಿಸ ಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ. ಮನಪಾದಲ್ಲಿರುವ ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಜ್ಞರಾದ ದಯಾನಾಥ್ ಕೋಟ್ಯಾನ್, ಪ್ರೊ. ವಿವೇಕ ರೈ, ಪ್ರೊ. ಮಧ್ಯಸ್ಥ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಜಿಲ್ಲೆಯಲ್ಲಿ ನೀರಿನ ಅಭಾವ ಆಗದ ರೀತಿಯಲ್ಲಿ ಯಾವ ರೀತಿ ನಿರ್ವಹಣೆ ಮಾಡಬಹುದು ಎಂಬ ಬಗ್ಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗು ವುದು. ಇಲ್ಲಿ ವ್ಯಕ್ತವಾ ಗುವ ಸಲಹೆ ಸೂಚನೆಗಳನ್ನು ಕ್ರೋಡೀಕರಿಸಿ ಸಮಗ್ರ ವರದಿಯನ್ನು ತಯಾರಿಸಲಾಗುವುದು ಎಂದು ಅವರು ಹೇಳಿದರು. ರಾಜ್ಯದಲ್ಲಿ ದ.ಕ., ಕೊಡಗು ಹಾಗೂ ಉಡುಪಿ ಹೊರತುಪಡಿಸಿ ಇತರ 27ಜಿಲ್ಲೆಗಳ ಬರ ಪರಿ ಹಾರಕ್ಕಾಗಿ 12,272ಕೋಟಿ ರೂ.ಗಳಿಗೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ರಾಜ್ಯದ ಸಂಸ ದರು, ಸಚಿವರು ಈ ಬಗ್ಗೆ ಕೇಂದ್ರ ಸರಕಾರವನ್ನು ಒತ್ತಾ ಯಿಸಬೇಕಾಗಿದೆ. ಮಾತ್ರವಲ್ಲದೆ ದ.ಕ.ಜಿಲ್ಲೆಯಲ್ಲೂ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಒತ್ತು ನೀಡಬೇಕು ಎಂದು ಅವರು ಹೇಳಿದರು. ತುಂಬೆ ಅಣೆಕಟ್ಟಿನಲ್ಲಿ 4.6 ಅಡಿಗಳಷ್ಟು ನೀರಿದ್ದು, ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಅಲ್ಲಿರುವ ನೀರನ್ನು ಸಂಪೂರ್ಣವಾಗಿ ಮೇಲೆತ್ತಲು ಕ್ರಮ ಕೈಗೊಳ್ಳಲಾಗಿದ್ದು, ಮೂರು ದಿನಗಳಿಗೊಮ್ಮೆ ಪೂರೈಕೆಯಂತೆ ಒಂದು ವಾರಕ್ಕೆ ನೀರು ಸಾಕಾಗಬಹುದು. ಉಳಿದಂತೆ ಇತರ ಮೂಲಗಳಿಂದ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. 11 ಮಂದಿಗೆ 3.77 ಲಕ್ಷ ರೂ. ಮುಖ್ಯಮಂತ್ರಿ ಪರಿಹಾರ ಧನ ವಿತರಣೆ

ಈ ಸಂದರ್ಭ ಐವನ್ ಡಿಸೋಜಾರವರು ತಮ್ಮ ಶಿಫಾರಸಿನ ಮೇರೆಗೆ ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಿಡುಗಡೆಯಾದ ಪರಿಹಾರ ಧನವನ್ನು ಅರ್ಜಿ ದಾರರಿಗೆ ವಿತರಿಸಿದರು. ಒಟ್ಟು 11 ಮಂದಿಗೆ 3,77,236 ರೂ.ಬಿಡುಗಡೆಯಾಗಿದೆ.


 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News