ಮುಲ್ಕಿ ಬಿಲ್ಲವ ಸಂಘದ ಕಚೇರಿಯಲ್ಲಿ ಕಳ್ಳತನ

Update: 2016-05-10 16:19 GMT

ಮುಲ್ಕಿ, ಮೇ 10: ಇಲ್ಲಿನ ಬಿಲ್ಲವ ಸಂಘದ ಬಾಗಿಲಿನ ಬೀಗ ಮುರಿದು ಒಳಹೊಕ್ಕ ಕಳ್ಳರು ಸರಳಿನಿಂದ ಕಪಾಟಿನ ಬೀಗ ಮುರಿದು ಕಪಾಟಿನಲ್ಲಿದ್ದ ಸುಮಾರು 5 ಸಾವಿರ ರೂ. ನಗದು ಕಳವುಗೈದಿದ್ದಾರೆ.

ಸೋಮವಾರ ಸಂಘದಲ್ಲಿ ಮದುವೆ ಸಮಾರಂಭ ಇದ್ದ ಕಾರಣ ಬಟವಾಡೆ ಮಾಡಿ ಇಟ್ಟಿದ್ದ ಉಳಿದ ಹಣ ಕಳ್ಳರ ಪಾಲಾಗಿದೆ ಎಂದು ತಿಳಿದು ಬಂದಿದೆ.

ಕೆಲ ತಿಂಗಳ ಹಿಂದೆ ಇದೇ ಬಿಲ್ಲವ ಸಂಘದಲ್ಲಿ ಭಾರೀ ಮೊತ್ತದ ಹಣವನ್ನು ಹಿಂಬಾಗಿಲಿನ ಮೂಲಕ ಬಂದ ಕಳ್ಳರು ಕಳ್ಳತನ ಮಾಡಿದ್ದರು. ಆದರೆ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News