ಬೆಳ್ತಂಗಡಿ: ಮೇ 13ರಂದು ಸಮಸ್ತ ಮಹಾ ಸಮ್ಮೇಳನ

Update: 2016-05-10 17:53 GMT

ಬೆಳ್ತಂಗಡಿ, ಮೇ 10: ದಾರುಸ್ಸಲಾಂ ಇಸ್ಲಾಮಿಕ್ ಕಾಂಪ್ಲೆಕ್ಸ್ ಮತ್ತು ಖಿಳ್‌ರಿಯಾ ಜುಮ್ಮಾ ಮಸೀದಿ ಬೆಳ್ತಂಗಡಿ ಸಂಯುಕ್ತ ಆಶ್ರಯದಲ್ಲಿ ಮೇ 13 ರಂದು ದಾರುಸ್ಸಲಾಂ ದಅ್ವಾ ಕಾಲೇಜಿನ ಶುಭಾರಂಭದದ ಪ್ರಯುಕ್ತ ಸಮಸ್ತ ಮಹಾ ಸಮ್ಮೇಳನ ಬೆಳ್ತಂಗಡಿ ಶಂಸುಲ್ ಉಲಮಾನಗರದ ಖಿಳ್‌ರಿಯ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಯು ಕೆ. ಅಬ್ದುಲ್ ನಝೀರ್ ದಾರಿಮಿ ಚೊಕ್ಕಬೆಟ್ಟು ಹೇಳಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕತೆಯ ಪ್ರವಾಹಕ್ಕೆ ಒಳಗಾಗಿ ಅಸ್ಮಿತೆಯನ್ನು ಕಳಕೊಳ್ಳುತ್ತಿರುವ ಯುವ ಜನಾಂಗವನ್ನು ಧಾರ್ಮಿಕತೆ ಮತ್ತು ಸದಾಚಾರದ ಕಡೆಗೆ ಕರೆದು ಸುಸಂಸ್ಕೃತ ಸಮಾಜವಾಗಿ ಪರಿವರ್ತಿಸಿ, ಸಮಾಜ ಹಾಗೂ ದೇಶದ ಅಭಿವೃದ್ದಿ ಕಾಯ್ದಲ್ಲಿ ತೊಡಗಿಸಿಕೊಳ್ಳುವಂತೆ ಸಜ್ಜುಗೊಳಿಸುವುದೇ ಸಂಸ್ಥೆಯ ಗುರಿಯಾಗಿದೆ.

ಸಂಸ್ಥೆಯು ಏಳನೆ ತರಗತಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಧಾರ್ಮಿಕ ಹಾಗು ಲೌಕಿಕ ಸಮನ್ವಯ ಶಿಕ್ಷಣವನ್ನು ಉಚಿತವಾಗಿ ನೀಡಿ, ಧರ್ಮಪ್ರಚಾರಕರಾಗಿ ರೂಪಿಸುವ ಸಲುವಾಗಿ ಕಾಲೇಜನ್ನು ಆರಂಭಿಸಲು ಗುರಿ ಇಟ್ಟಿದೆ. ಝೈನುಲ್ ಅಬಿದೀನ್ ತಂಙಳ್, ಆಲಿ ತಂಙಳ್, ಮತ್ತು ಬದ್ರುದ್ದೀನ್ ತಂಙಳ್ ಮಂಜೇಶ್ವರ ಸೇರಿ ಸಂಸ್ಥೆಯನ್ನು ಆರಂಭಿಸಲಾಗಿದೆ. ಬೆಳ್ತಂಗಡಿಯಲ್ಲಿ ಖಿಳ್‌ರಿಯಾ ಮಸೀದಿಯ ವಠಾರದಲ್ಲಿ ಕಾಲೇಜನ್ನು ಆರಂಭಿಸುತ್ತಿದ್ದು, ಸಂಸ್ಥೆಯ ಕನಸು ನನಸಾಗುತ್ತಿದೆ ಎಂದರು.

ದಅವಾ ಕಾಲೇಜನ್ನು ಕೇರಳದ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಶೈಖುನಾ ಆಲಿಕುಟ್ಟಿ ಉಸ್ತಾದ್ ಉದ್ಘಾಟಿಸಿ ಶುಬಾರಂಭ ೋಷಣೆ ಮಾಡಲಿದ್ದಾರೆ. ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದು, ಪಾಣಕ್ಕಾಡು ಶಫೀಖಲೀ ಶಿಹಾಬ್ ತಂಙಳ್, ಸೈಯದ್ ಆಲಿ ತಂಙಳ್ ಕುಂಬೋಳ್, ಮೂಡಿಗೆರೆ ಖಾಝಿ ಎಂ.ಎಂ. ಖಾಸಿಂ ಉಸ್ತಾದ್, ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು ಮೊದಲಾದ ವಿದ್ವಾಂಸರು, ಉಲಮಾ ಉಮಾರ ನೇತಾರರು, ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರುಗಳು ಬಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಸ್ಸೆಯದ್ ಅಲಿ ತಂಙಳ್ ಮಂಗಳೂರು, ಅಸೈಯದ್ ಬದ್ರುದೀನ್ ತಂಙಳ್ ಮಂಜೇಶ್ವರ, ಕ್ಯೂ.ಜೆ.ಎಂ. ಅಧ್ಯಕ್ಷ ಬಿ. ಎ. ನಝೀರ್, ಸಿರಾಜುದ್ದೀನ್ ಚಿಲಿಂಬಿ, ಬಶೀರ್ ದಾರಿಮಿ, ಶಂಸುದ್ದೀನ್ ದಾರಿಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News