ಖ್ಯಾತ ಸಂಸ್ಥೆಗಳ ನಕಲಿ ಸಾಮಗ್ರಿ ಮಾರಾಟ ಪತ್ತೆ

Update: 2016-05-10 18:22 GMT

ಮಂಗಳೂರು, ಮೇ 10:ನಗರದ ಮೂರು ಬ್ಯಾಗ್ ಮಾರಾಟದ ಅಂಗಡಿಗಳಲ್ಲಿ ಫಾಸ್ಟ್ ಟ್ರಾಕ್ ಮತ್ತು ಅಮೇರಿಕನ್ ಟೂರಿಸ್ಟ್ ಎಂಬ ಕಂಪೆನಿಯ ಬ್ಯಾಗ್‌ಗಳನ್ನು ನಕಲು ಮಾಡಿ ಕಂಪೆನಿಯ ಹೆಸರಿನ ಬ್ಯಾಗ್‌ಗಳೆಂದು ಹೇಳಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಚೆನ್ನೈಯ ಕಂಪೆನಿಯ ವ್ಯವಸ್ಥಾಪಕ ದೂರು ನೀಡಿದ್ದಾರೆ.
    ಆ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಶೃಂಗಾರ್, ಮಹಾದೆವ್, ಲೇಟೆಸ್ಟ್ ಎಂಬ ಮೂರು ಅಂಗಡಿಗಳ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ನಕಲಿ ಸಾಮಗ್ರಿಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News