ನೀರಿನ ಸಮಸ್ಯೆ: ಸಾರ್ವಜನಿಕರಿಂದ ಪ್ರತಿಭಟನೆ

Update: 2016-05-10 18:52 GMT

ಕಾರ್ಕಳ, ಮೇ 10: ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಸಮರ್ಪಕವಾಗಿ ನೀರು ವಿತರಣೆಮಾಡುವಲ್ಲಿ ಪುರಸಭೆ ಆಡಳಿತ ವಿಲಗೊಂಡಿರುವುದನ್ನು ಖಂಡಿಸಿ ಪುರಸಭೆಯ ಪ್ರತಿಪಕ್ಷದ ಸದಸ್ಯರು ಸಾರ್ವಜನಿಕರೊಂದಿಗೆ ಮಂಗಳವಾರ ಪ್ರತಿಭಟಿಸಿದರು. ಪುರಸಭೆ ವ್ಯಾಪ್ತಿಯಲ್ಲಿ ಪೈಪ್‌ಲೈನ್‌ಗಳು ಒಡೆದು ಹೋಗಿದ್ದು, ಸರಿಪಡಿಸದ ಹಿನ್ನೆಲೆಯಲ್ಲಿ ನೀರು ಪೋಲಾಗುತ್ತಿದೆ. ಇನ್ನೊಂದೆಡೆ ಅಗತ್ಯವಿದ್ದ ಸ್ಥಳಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿಲ್ಲ. ಇದರಿಂದ ಜನತೆ ಭಾರೀ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಪ್ರತಿಪಕ್ಷದ ಸದಸ್ಯರು ಆರೋಪಿಸಿದರು. ಮುಖ್ಯಾಕಾರಿ ರಾಯಪ್ಪ ಮಾತನಾಡಿ, ಸಮಸ್ಯೆಯನ್ನು ಕೂಡಲೇ ಬಗೆಹರಿಸಿ, ನೀರಿನ ಪೂರೈಕೆ ಕಲ್ಪಿಸುವುದಾಗಿ ತಿಳಿಸಿದರು. ಪುರಸಭೆ ಅಧ್ಯಕ್ಷೆ ಅನಿತಾ ಅಂಚನ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ದೇವಾಡಿಗ, ಸದಸ್ಯರಾದ ಸುಭಿತ್ ಕುಮಾರ್‌ಎನ್., ಶುಭದ ರಾವ್, ಅಕ್ಷಯ್, ವಿವೇಕಾನಂದ ಶೆಣೈ, ಪ್ರತಿಮಾ ರಾಣೆ, ಶಾಂತಿ ಶೆಟ್ಟಿ, ವಂದನ ಜತ್ತನ್ನ, ವಿನ್ನಿಬೋಲ್ಡ್ ಮೆಂಡೋನ್ಸಾ, ನಳಿನಿ ಆಚಾರ್ಯ, ರಹ್ಮತ್ ಎನ್.ಶೇಖ್, ಪ್ರಿಯಾ ರಾಜೇಂದ್ರ, ಸುನೀಲ್ ಕೋಟ್ಯಾನ್ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News