ನೌಕಾಪಡೆಯ ಸಬ್‌ಲೆಫ್ಟಿನೆಂಟ್ ಅಧಿಕಾರಿಯಾಗಿ ಪುತ್ತೂರಿನ ಹಾಫಿಝ್ ಕೆ.ಎ. ಆಯ್ಕೆ

Update: 2016-05-11 14:42 GMT

ಮಂಗಳೂರು, ಮೇ 11: ಭಾರತೀಯ ನೌಕಾಪಡೆ (ಇಂಡಿಯನ್ ನೇವಿ) ಇಂಜಿನಿಯರಿಂಗ್ ಬ್ರಾಂಚ್ ಜನರಲ್ ಸರ್ವಿಸ್ ಸಬ್ ಲೆಫ್ಟಿನೆಂಟ್ ಪ್ರಥಮ ಶ್ರೇಣಿಯ ಅಧಿಕಾರಿಯಾಗಿ ಪುತ್ತೂರಿನ ಹಾಫಿಝ್ ಕೆ.ಎ. (23) ಭಾರತೀಯ ನೌಕಾಪಡೆಯಿಂದ ನೇಮಕಗೊಂಡಿದ್ದಾರೆ.

2015ರ ನವೆಂಬರ್‌ನಲ್ಲಿ ಭಾರತೀಯ ನೌಕಾಪಡೆ ವತಿಯಿಂದ ಕೊಯಂಬತ್ತೂರು ಮತ್ತು ಕೊಚ್ಚಿಯಲ್ಲಿ ಎಸ್.ಎಸ್.ಬಿ. ಸಂದರ್ಶನಕ್ಕಾಗಿ ಆಯ್ಕೆಗೊಂಡಿದ್ದ, ದೇಶದ ವಿವಿಧ ರಾಜ್ಯಗಳ 150 ಇಂಜಿನಿಯರ್‌ಗಳಲ್ಲಿ ತಾಂತ್ರಿಕ, ಸಾಮಾಜಿಕ, ಮಾನಸಿಕ, ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಗಳಲ್ಲಿ ಆಯ್ಕೆಯಾಗಿರುವ ಏಕೈಕ ಅಭ್ಯರ್ಥಿ ಪುತ್ತೂರಿನ ಹಾಫಿಝ್ ಕೆ.ಎ..

ಮೆಕಾನಿಕಲ್ ಇಂಜಿನಿಯರ್ ಪದವೀಧರರಾಗಿರುವ ಇವರು ಪುತ್ತೂರು ಸಾಲ್ಮರ ಮೌಂಟನ್ ವ್ಯೆ ಆಂಗ್ಲ ಮಾಧ್ಯಮ ಸ್ಕೂಲ್, ಸುದಾನ ಶಾಲೆ, ಫಿಲೋಮಿನಾ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ.

ಹಾಫಿಝ್ ಕೆ.ಎ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಹಿರಿಯ ಆರೋಗ್ಯ ಮೇಲ್ವಿಚಾರಕರಾಗಿರುವ ಕೆ. ಅಬೂಬಕರ್ ಹಾಗೂ ಆಯಿಷಾ ದಂಪತಿಯ ದ್ವಿತೀಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News