ನೀರಿಗೆ ಹಣ ಪಡೆದರೆ ಸೂಕ್ತ ಕ್ರಮ: ಜಿಪಂ ಸಿಇಒ

Update: 2016-05-11 18:27 GMT

ಮಂಗಳೂರು, ಮೇ 11: ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಪಂಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಪಂ ಸಿಇಒ ಪಿ.ಐ.ಶ್ರೀವಿದ್ಯಾ ಎಚ್ಚರಿಕೆ ನೀಡಿದ್ದಾರೆ.

ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ)ಗಳ ಮಾಸಿಕ ಸಭೆಯಲ್ಲಿ ಜಿಪಂ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತಾದ ಚರ್ಚೆಯ ವೇಳೆ ಅವರು ಈ ಎಚ್ಚರಿಕೆ ನೀಡಿದರು.

ಉಪಾಧ್ಯಕ್ಷೆ ಕಸ್ತೂರಿ ಪಂಜ ಸಭೆಯಲ್ಲಿ ಟ್ಯಾಂಕರ್ ನೀರು ಪೂರೈಕೆ ಕುರಿತಂತೆ ವಿಷಯ ಪ್ರಸ್ತಾಪಿಸಿ, ಬೇಕಾಬಿಟ್ಟಿ ಯಾಗಿ ಟ್ಯಾಂಕರ್‌ಗಳಲ್ಲಿ ನೀರು ಪೂರೈಸುತ್ತಿರುವುದಲ್ಲದೆ 6,000 ಲೀಟರ್ ನೀರಿಗೆ 3,000 ರೂ. ಶುಲ್ಕ ಪಡೆದ ಪ್ರಸಂಗ ಎಕ್ಕಾರು ಗ್ರಾಪಂನಲ್ಲಿ ನಡೆದಿದೆ ಎಂದು ದೂರಿ ದರು. ಮಾತ್ರವಲ್ಲದೆ, ಪಿಡಿಒಗಳು ಕರೆ ಮಾಡಿದರೆ ಪ್ರತಿಕ್ರಿ ಯಿಸುವುದಿಲ್ಲ. ತೆಂಕಮಿಜಾರು ಪಿಡಿಒಗೆ ನಾಲ್ಕೈದು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ. ಬಳಿಕ ಕರೆ ಮಾಡಿ ವಿಚಾರಿಸಿಯೂ ಇಲ್ಲ. ನಮಗೇ ಇಂತಹ ಪರಿಸ್ಥಿತಿಯಾದರೆ ಇನ್ನು ಜನಸಾಮಾನ್ಯರ ಕರೆಯನ್ನು ಸ್ವೀಕರಿಸುತ್ತಾರೆಯೇ ಎಂದು ಬೇಸರಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಇಒ, ಯಾರೇ ಕರೆ ಮಾಡಿದರೂ ಅದಕ್ಕೆ ಸೂಕ್ತವಾಗಿ ಸ್ಪಂದಿಸುವಂತೆ ಎಲ್ಲ ಅಧಿಕಾರಿಗಳಿಗೂ ನಿರ್ದೇಶನ ನೀಡಲಾಗಿದೆ. ನಿರ್ಲಕ್ಷ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾ ಗುವುದು ಎಂದು ಹೇಳಿದರು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಪ್ರತಿಕ್ರಿಯಿಸಿ, ಬರ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಯುದ್ಧೋಪಾದಿಯಲ್ಲಿ ಎದುರಿಸಬೇಕಾಗಿದೆ. ಇದಕ್ಕೆ ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಜನಸಾಮಾನ್ಯರ ಜೊತೆ ಸಹಕರಿಸಬೇಕು ಎಂದು ಸೂಚಿಸಿದರು. ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ತಾಲೂಕು ಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಇಒ, ಕೃಷಿಗೆ ನೀರನ್ನು ಬಳಕೆ ಮಾಡದಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಿದರು.


ಅಧಿಕಾರಿಗಳು ಪರಿಚಯಿಸಿಕೊಂಡಿಲ್ಲ: ಅಧ್ಯಕ್ಷೆಯ ಅಳಲು

‘‘ನಾನು ಜಿಪಂ ಅಧ್ಯಕ್ಷೆ ಸ್ಥಾನ ಸ್ವೀಕರಿಸಿ ಒಂದು ತಿಂಗಳಾದರೂ ಕೆಲ ಅಧಿ ಕಾರಿಗಳು ಇನ್ನೂ ನನ್ನನ್ನು ಭೇಟಿಯಾಗಿ ಪರಿಚಯಿಸಿಕೊಳ್ಳುವ ಸೌಜನ್ಯ ತೋರಿಸಿಲ್ಲ’’ ಎಂದು ಜಿಪಂ ನೂತನ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಪ್ರಥಮ ಕೆಡಿಪಿ ಸಭೆಯಲ್ಲೇ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಹಾಜರಾಗಿದ್ದಾರೆಯೇ ಎಂದು ಪ್ರಶ್ನಿಸುತ್ತಾ, ಹಾಜರಾತಿ ಪಡೆದುಕೊಂಡ ಬಳಿಕ ಅಧಿಕಾರಿಗಳನ್ನು ಪರಿಚಯಿಸಿಕೊಳ್ಳುವಂತೆ ತಿಳಿಸಿ, ಗೈರು ಹಾಜರಾದ ಅಧಿಕಾರಿಗಳ ಹೆಸರನ್ನು ಸರ ಕಾರಕ್ಕೆ ಬರೆಯಲಾಗುವುದು ಎಂದು ಹೇಳಿದಾಗ, ಅಧಿಕಾರಿಗಳು ಎದ್ದು ನಿಂತು ತಮ್ಮನ್ನು ಪರಿಚಯಿಸಿದರು. ಇಬ್ಬರು ಅಧಿಕಾರಿಗಳು ಅನುಮತಿ ಪಡೆದು ಸಭೆಯಲ್ಲಿ ಗೈರುಹಾಜರಾಗಿದ್ದು, ಉಳಿದಂತೆ ಗೈರುಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡುವುದಾಗಿ ಸಿಇಒ ಶ್ರೀವಿದ್ಯಾ ಸಭೆಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News