"ಇಂದು ಮಂಗಳೂರು ವಿವಿಯಲ್ಲಿ ನಕ ಸ್ಮತಿ’ ಕಾರ್ಯಕ್ರಮ

Update: 2016-05-11 18:37 GMT

ಕೊಣಾಜೆ, ಮೇ 11: ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ‘ಕನಕ ಸ್ಮತಿ’ ಎಂಬ ವಿಶೇಷ ಕಾರ್ಯಕ್ರಮವು ಮೇ 12ರಂದು ಮಧ್ಯಾಹ್ನ 2:30ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಹಳೆಯ ಸೆನೆಟ್ ಸಭಾಂಗಣದಲ್ಲಿ ನಡೆಯಲಿದೆ.
ಬೆಂಗಳೂರಿನ ಸಂಸ್ಕೃತಿ ಚಿಂತಕರಾದ ಪ್ರೊ.ಒ.ಎಲ್. ನಾಗಭೂಷಣ ಸ್ವಾಮಿ ವಿಶೇಷ ಉಪನ್ಯಾಸ ನೀಡಲಿದ್ದು, ಮಂಗಳೂರು ವಿ.ವಿ.ಕುಲಪತಿ ಪ್ರೊ.ಕೆ. ಭೈರಪ್ಪಅಧ್ಯಕ್ಷತೆ ವಹಿಸಲಿದ್ದಾರೆ. ಅಂತರ್‌ಕಾಲೇಜು ಮತ್ತು ಸಾರ್ವಜನಿಕ ಮಟ್ಟದ ‘ಕನಕ ಕೀರ್ತನ’ ಕನಕದಾಸರ ಕೀರ್ತನ ಗಾಯನ ಕಾರ್ಯಕ್ರಮದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಗದು ಪುರಸ್ಕಾರ, ಕನಕ ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಉಡುಪಿ ಎಪಿಎಂಸಿ ುನಾವಣೆ ಮುಂದೂಡಿಕೆಉಡುಪಿ, ಮೇ 11: 2016ನೆ ಸಾಲಿನಲ್ಲಿ ಅವಧಿ ಮುಕ್ತಾಯಗೊಳ್ಳುವ ಜಿಲ್ಲಾ ವ್ಯಾಪ್ತಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಚುನಾವಣೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಇಲಾಖೆಯ ಹೆಚ್ಚುವರಿ ನಿರ್ದೇಶಕರ ಪ್ರಕಟನೆ ತಿಳಿಸಿದೆ.
ರಾಜ್ಯದಲ್ಲಿ ಸದ್ಯಕ್ಕಿರುವ ತೀವ್ರ ಬರಪರಿಸ್ಥಿತಿ ಹಾಗೂ 2016-17ನೆ ಸಾಲಿನ ಆಯವ್ಯಯ ಭಾಷಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಆಡಳಿತದಲ್ಲಿ ಪ್ರಸ್ತುತ ಇರುವ ಒಂದು ಮಹಿಳಾ ಪ್ರಾತಿನಿಧ್ಯ ಸ್ಥಾನವನ್ನು ಮೂರು ಸ್ಥಾನಗಳಿಗೆ ಹೆಚ್ಚಿಸುವ ಘೋಷಣೆಯಾಗಿದ್ದು, ಈ ಕುರಿತು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಹಾಗೂ ಅಭಿವೃದ್ಧಿ) ಅಧಿನಿಯಮಕ್ಕೆ ತಿದ್ದುಪಡಿಯ ಪ್ರಸ್ತಾಪ ಚಾಲನೆಯಲ್ಲಿರುವುದರಿಂದ 2016ನೆ ಸಾಲಿನಲ್ಲಿ ಅಧಿಕಾರಾವಧಿ ಮುಕ್ತಾಯಗೊಳ್ಳುವ ಹಾಗೂ ಈಗಾಗಲೇ ಅಧಿಕಾರದ ಅವಧಿ ಮುಕ್ತಾಯಗೊಂಡಿರುವ ಎಪಿಎಂಸಿಗಳಿಗೆ ನಡೆಯಬೇಕಾದ ಚುನಾವಣೆ ಯನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News